ನವದೆಹಲಿ: ಕಳೆದ ವರ್ಷ ದೆಹಲಿಯಲ್ಲಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದ್ದಾಗ ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ ಆಪ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮಾಡಿ ಎಂದು ಅರವಿಂದ್ ಕೇಜ್ರಿವಾಲ್ ನನ್ನಲ್ಲಿ ಹೇಳಿದ್ದರು ಎಂದು ಆಪ್ ಮಾಜಿ ಶಾಸಕ ರಾಜೇಶ್ ಗಾರ್ಗ್ ಆರೋಪಿಸಿದ್ದರು. ಈ ಆರೋಪದ ನಂತರ ಇದೀಗ ತಮಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಗಾರ್ಗ್ ದೂರು ನೀಡಿದ್ದಾರೆ.
ಶನಿವಾರ ತಮಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ನಿನಗೆ ಬದುಕ ಬೇಕೋ ಬೇಡವೋ ಎಂದು ಫೋನ್‌ನಲ್ಲಿ ಜೀವ ಬೆದರಿಕೆಯೊಡ್ಡಲಾಗಿದೆ. ಈ ಬಗ್ಗೆ ನಾನು ಪ್ರಶಾಂತ್ ವಿಹಾರ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಿರುವುದಾಗಿ ಗಾರ್ಗ್ ಹೇಳಿದ್ದಾರೆ.
ಪೊಲೀಸರು ಫೋನ್ ಸಂಭಾಷಣೆಯ ಆಡಿಯೋ ತೆಗೆದು ಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅದೇ ವೇಳೆ ನಿನ್ನೆ ಕೂಡಾ ಅಂತಾರಾಷ್ಟ್ರೀಯ ಫೋನ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿತ್ತು ಎಂದು ಗಾರ್ಗ್ ದೂರಿದ್ದಾರೆ.