ಜಪಾನ್: ಇಲ್ಲಿ ಜನಗಳಿಗಿಂತ ಹೆಚ್ಚು ಬೆಕ್ಕುಗಳಿವೆ!. ಹುಬ್ಬೇರಿಸಬೇಡಿ. ಇದು ದಕ್ಷಿಣ ಜಪಾನ್‌ನ ಓಷಿಮಾ ಐಲ್ಯಾಂಡ್. ಇಲ್ಲಿ ಎಲ್ಲೆಂದರಲ್ಲಿ ಬೆಕ್ಕುಗಳು ನಿರ್ಭಯವಾಗಿ ಓಡಾಡಿಕೊಂಡಿರುವುದನ್ನು ನೀವು ಕಾಣಬಹುದು.
ಓಷಿಮಾ ಐಲ್ಯಾಂಡ್ ಕ್ಯಾಟ್ ಐಲ್ಯಾಂಡ್ ಆಗಿ ಬದಲಾಗಿದ್ದು ಹೇಗೆ ಎಂದು ಕೇಳಿದರೆ ಅಲ್ಲಿನ ನಿವಾಸಿಗಳು ಹೇಳುವುದು ಹೀಗೆ:
ಈ ದ್ವೀಪದ ಜನರ ಮುಖ್ಯ ಕಸುಬು ಮೀನುಗಾರಿಕೆ. ಮೀನುಗಾರಿಕೆ ನಡೆಸುವ ದೋಣಿಗಳಲ್ಲಿ ಇಲಿಗಳ ಉಪದ್ರವ ಜಾಸ್ತಿಯಾದಾಗ ಅದಕ್ಕೆ ಅವರ ಮುಂದೆ ಇದ್ದ ಪರಿಹಾರ ಬೆಕ್ಕುಗಳನ್ನು ತರುವುದು. ಜನರು ಬೆಕ್ಕುಗಳನ್ನು ಸಾಕುವ ಮೂಲಕ ಇಲಿಗಳ ಕಾಟದಿಂದ ಮುಕ್ತಿ ಪಡೆದರು. ಹೀಗಿರುವಾಗ ಎರಡನೇ ಲೋಕ ಮಹಾಯುದ್ಧದ ನಂತರ ದ್ವೀಪದ ನಿವಾಸಿಗಳಲ್ಲಿ ಹೆಚ್ಚಿನವರು ಒಳ್ಳೆಯ ಕೆಲಸ ಹುಡುಕಿ ಜಪಾನ್‌ನ ನಗರ ಪ್ರದೇಶಗಳಿಗೆ ಹೋದರು. ಆವಾಗ ಬೆಕ್ಕುಗಳು ಇಲ್ಲೇ ಬಾಕಿಯಾಗಿದ್ದು ಅವುಗಳ ಸಂತತಿ ಹೆಚ್ಚುತ್ತಾ ಹೋಯಿತು.
ಇಲ್ಲಿನ ಕೆಫೆ, ಬಂದರು, ರೆಸ್ಟೋರೆಂಟ್‌ಗಳಲ್ಲಿ ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳು ಓಡಾಡುವುದನ್ನು ಕಾಣಬಹುದು ಎಂಬುದು ಕ್ಯಾಟ್ ಐಲ್ಯಾಂಡ್‌ನ ವಿಶೇಷ.