ವಿಕೆ ಸಿಂಗ್ 
ದೇಶ

6,200 ಭಾರತೀಯರು ವಿದೇಶಿ ಜೈಲುಗಳಲ್ಲಿ ಸೆರೆ

6200ಕ್ಕೂ ಹೆಚ್ಚು ಭಾರತೀಯರು ವಿದೇಶಿ ಜೈಲುಗಳಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಅತಿ ಹೆಚ್ಚು ಅಂದರೆ 1,508 ಜನರು ಸೌಧಿ ಅರೇಬಿಯಾದ ಕಾರಾಗೃಹಗಳಲ್ಲಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದೆ.

ನವದೆಹಲಿ: 6200ಕ್ಕೂ ಹೆಚ್ಚು ಭಾರತೀಯರು ವಿದೇಶಿ ಜೈಲುಗಳಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಅತಿ ಹೆಚ್ಚು ಅಂದರೆ 1,508 ಜನರು ಸೌಧಿ ಅರೇಬಿಯಾದ ಕಾರಾಗೃಹಗಳಲ್ಲಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿ.ಕೆ.ಸಿಂಗ್, ಮೀನುಗಾರರು ಸೇರಿದಂತೆ ಒಟ್ಟು 6,290 ಭಾರತೀಯ ಪ್ರಜೆಗಳು 72 ರಾಷ್ಟ್ರಗಳ ಜೈಲುಗಳಲ್ಲಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ಶಿಕ್ಷೆಗೆ ಒಳಗಾದ ಕೈದಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ 20 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು 45 ಜನರನ್ನು ಸ್ವದೇಶಕ್ಕೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದರು.

ಸೌದಿ ಅರೇಬಿಯಾದಲ್ಲಿ 1,508, ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ 785, ನೆರಯ ನೇಪಾಳದಲ್ಲಿ 614, ಇಂಗ್ಲೆಂಡಿನಲ್ಲಿ 437 ಹಾಗೂ ಪಾಕಿಸ್ತಾನದ ಜೈಲುಗಳಲ್ಲಿ  352 ಭಾರತೀಯ ಪ್ರಜೆಗಳು  ಸಿಲುಕಿದ್ದಾರೆ.

ಇನ್ನು, ಗಲ್ಫ್ ರಾಷ್ಟ್ರಗಳಾದ ಬಹ್ರೈನ್, ಇರಾಕ್, ಇರಾನ್‌, ಕುವೈತ್‌, ಓಮನ್‌, ಕತಾರ್ ಮತ್ತು ಯೆಮೆನ್‌ಗಳಲ್ಲಿ ಒಟ್ಟು 2,909 ಭಾರತೀಯರು ಸೆರೆಮನೆಯಲ್ಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು