ಇಸ್ಲಾಮಾಬಾದ್: ಗಲ್ಲು ಶಿಕ್ಷಗೆ ಗುರಿಯಾಗಿ ಕಾರಾಗೃಹದಲ್ಲಿದ್ದ ನಾಲ್ವರು ಅಪರಾಧಿಗಳನ್ನು ಪಾಕಿಸ್ಥಾನ ಸರ್ಕಾರ ಇಂದು ಗಲ್ಲಿಗೇರಿಸಿದೆ.
ರಾವಲ್ಫಿಂಡಿ ಅಡಿಯಾಲಾ ಸೆರೆಮನೆಯಲ್ಲಿ ಮೂವರನ್ನು ಗಲ್ಲಿಗೇರಿಸಿದ್ದು, ಇನ್ನೊಬ್ಬನನ್ನು ಮಿಯಾನನ್ ವಾಲಿ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿದೆ.
ಆದರೆ, ಇನ್ನೊಬ್ಬ ಅಪರಾಧಿಯ ಪೋಷಕರು, ತಮ್ಮ ಮಗ ಇನ್ನು 14 ವಯಸ್ಸಿನವನಾಗಿದ್ದು, ಅವನಿಂದ ಪೊಲೀಸರು ಬಲವಂತವಾಗಿ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವನ ಗಲ್ಲು ಶಿಕ್ಷೆಯನ್ನು ಕಾಯ್ದಿರಿಸಲಾಗಿದೆ.
ಗಲ್ಲಿಗೇರಿದವರ ಪೈಕಿ ಇಬ್ಬರು ಸಹೋದರರಾಗಿದ್ದಾರೆ. ಮೊಹ್ಮದ್ ಅಸ್ಫರ್ ಮತ್ತು ಗುಲಾಮ್ ಮೊಹಮದ್ ಇವರಿಬ್ಬರು 1996 ರಲ್ಲಿ ಬಂಧುಗಳಿಬ್ಬರ ಹತ್ಯೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಮೂರನೇಯವನು 1998ರಲ್ಲಿ ವ್ಯಕ್ತಿಯೊಬ್ಬನ ಹತ್ಯೆ ಮಾಡಿದ್ದ. ಮತ್ತೊಬ್ಬ 7 ವರ್ಷದ ಬಾಲಕನೊಬ್ಬನನ್ನು ಅಪಹರಿಸಿ ಕೊಲೆಮಾಡಿದ್ದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು.