ರಕ್ಷಣಾ ದಳ 
ದೇಶ

ಆತ್ಮಹತ್ಯಾ ದಾಳಿ: ಆರು ಸಾವು

ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿನ ಪೋಲೀಸ್ ಠಾಣೆಯ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ ಉಗ್ರಗಾಮಿಗಳು ಮೂವರು...

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿನ  ಪೋಲೀಸ್ ಠಾಣೆಯ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ ಉಗ್ರಗಾಮಿಗಳು ಮೂವರು ರಕ್ಷಣಾ ದಳದ ಮಂದಿ, ಒಬ್ಬ ನಾಗರಿಕ ಸೇರಿದಂತೆ, ಒಟ್ಟು ನಾಲ್ಕು ಮಂದಿಯನ್ನು ಹತ್ಯೆಗೈದಿದ್ದಾರೆ. ಇದಕ್ಕೆ ಪ್ರತಿಯಾಗಿ ಸುರಕ್ಷತಾ ದಳ ನಡೆಸಿದ ಎನ್ ಕೌಂಟರ್‍ನಲ್ಲಿ ಇಬ್ಬರು ಉಗ್ರಗಾಮಿಗಳು ಸತ್ತಿದ್ದಾರೆ. ನಸುಕಿನಲ್ಲಿ ನಡೆದ ಘಟನೆಯಲ್ಲಿ 10ಕ್ಕಿಂತಲೂ ಹೆಚ್ಚು ಮಂದಿ ಗಾಯಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೊಂಡ ನಂತರ ನಡೆಯುತ್ತಿರುವ ಉಗ್ರಗಾಮಿಗಳ ಮೊದಲ ದಾಳಿ ನಡೆದಿದೆ. ಇಬ್ಬರಿಂದ ಮೂವರಿದ್ದ ಆತ್ಮಹತ್ಯಾ ದಳ ರಾಜ್‍ಬಾಗ್ ಪೊ ಲೀಸ್ ಸ್ಟೇಷನ್ ಮೇಲೆ ನಸುಕಿನಲ್ಲಿ ದಾಳಿ ನಡೆಸಿದ್ದಾರೆ. ಇದೊಂದು ಆತ್ಮಹತ್ಯಾ ದಳದ ಕೃತ್ಯ ಎಂದು ಜಮ್ಮುವಿನಐಜಿಪಿ ದನಿಶ್ ರಾಣಾ ತಿಳಿಸಿದ್ದಾರೆ.

ಸೇನಾ ಸಮವಸ್ತ್ರಗಳನ್ನು ಧರಿಸಿದ್ದಉಗ್ರಗಾಮಿಗಳು, ಜಮ್ಮು-ಪಠಾನ್ ಕೋಟ್‍ಗೆ ಸಾಗುತ್ತಿದ್ದ ಜೀಪನ್ನು ತಡೆದು, ತನಿಖೆ ಮಾಡುವ ನೆಪದಲ್ಲಿ ಅದನ್ನೇರಿದರು
ಎಂದು ಗಾಯಗೊಂಡಿರುವ ಸಿಆರ್ ಪಿಎಫ್ ಕಾನ್ಸ್‍ಟೇಬಲ್ ಭರತ್ ಪ್ರಭು ತಿಳಿಸಿದ್ದಾರೆ.ಜೀಪನ್ನು ಹೈಜಾಕ್ ಮಾಡಿದ ಉಗ್ರಗಾ ಮಿಗಳು ರಾಜ್‍ಬಾಗ್  ಪೊ ಲೀಸ್ ಸ್ಟೇಷನ್ ನತ್ತ ತೆರಳಿ, ಗ್ರೆನೇಡ್ ಎಸೆದು, ಬೆಂಕಿಯನ್ನು ಹಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು
ಪಠಾಣ್‍ಕೋಟ್ ಹೆದ್ದಾರಿಯನ್ನು ಮುಚ್ಚ ಲಾಗಿದೆ. ಇಡೀ ಪ್ರದೇಶವನ್ನು ಸುರಕ್ಷತಾ ದಳದವರು ಸುತ್ತುವರೆದಿದ್ದಾರೆ. ಗೃಹ ಸಚಿವ ರಾಜನಾಥಸಿಂಗ್ ಜಮ್ಮು ಮತ್ತು ಕಾಶ್ಮೀರದ ಡಿಜಿಪಿಯೊಂದಿಗೆ ಮಾತುಕತೆ ನಡೆಸಿ, ಘಟನೆ ಮೇಲೆ ತೀವ್ರ ನಿಗಾ ವಹಿಸುವಂತೆ ತಿಳಿಸಿದ್ದಾರೆ. 2013 ಮತ್ತು 2014ರಲ್ಲೂ ಸಹ ಕತುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಪೊಲೀಸ್ ಸ್ಟೇಷನ್ ಮತ್ತು ಸೇನಾ ಕ್ಯಾಂಪ್‍ಗಳ ಮೇಲೆ ಇದೇ ರೀತಿಯ ದಾಳಿ ನಡೆದಿತ್ತು.
ಪ್ರತಿಧ್ವನಿಸಿದ ದಾಳಿ: ನಸುಕಿನಲ್ಲಿ ನಡೆದದಾಳಿಯು ಜಮ್ಮು ವಿಧಾನಪರಿಷತ್  ಮಾಹಿತಿ
ಆಗ್ರಹಿಸಿದರು.
ಉಪಮುಖ್ಯಮಂತ್ರಿ ಡಾ. ನಿರ್ಮಲ್ ಸಿಂಗ್ ನೀಡಿದ ಮಾಹಿತಿಗೆ ಸಿಪಿಎಂ, ನ್ಯಾಷನಲ್ ಕಾನ್ಪರೆನ್ಸ್ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು. ಸಂಸತ್‍ನಲ್ಲಿ ಕಾಂಗ್ರೆಸ್
ನ ಸಂಸದ ಮಲ್ಲಿಕಾರ್ಜುನ ಖರ್ಗೆ ಉಗ್ರರ ದಾಳಿ ಬಗ್ಗೆ ಖಂಡಿಸಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಏಕೆ ಪ್ರತಿಕ್ರಿಯಿಸುತ್ತಿಲ್ಲ. ಅವರಿಗೆ ಈ ಬಗ್ಗೆ
ಜವಾಬ್ದಾರಿಯಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
6 ತಾಸು ಕಾರ್ಯಾ ಚರಣೆ: ಉಗ್ರಗಾಮಿಗಳು ನಡೆಸಿದ ದಾಳಿ ನಂತರ, ರಕ್ಷಣಾ ದಳದವರು ಪ್ರತಿದಾಳಿ ನಡೆಸಿದರು. ಈ ಕಾರ್ಯಾಚರಣೆ ಸತತ ಆರು ತಾಸು ನಡೆಯಿತು. ಮಧ್ಯಾಹ್ನದ ವೇಳೆಯ ವರೆಗೂ ನಡೆದ ಕಾರ್ಯಾಚರಣೆ ಬಳಿಕ ಇಬ್ಬರು ಉಗ್ರಗಾಮಿಗಳು ಸತ್ತಿರುವ ಮಾಹಿತಿಯನ್ನು ತಿಳಿಸಲಾಯಿತು.

ಮೊದಲ ಅಗ್ನಿಪರೀಕ್ಷೆ

 ಪಿಡಿಪಿ-ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿ ಕೇವಲ ಇಪ್ಪತ್ತು ದಿನಗಳಲ್ಲಿಯೇ  ಉಗ್ರಗಾಮಿಗಳ ದಾಳಿ ನಡೆಯುತ್ತಿರುವುದು ಅಗ್ನಿ ಪರೀಕ್ಷೆ ಯಾಗಿದೆ. ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಪಾಕಿಸ್ತಾನಕ್ಕೆ ನೀಡಿದ್ದ ಭೇಟಿ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಲ್ಲಿನ ಸರ್ಕಾರದ ಗಮನ ಸೆಳೆದಿದ್ದರು. ಮುಫ್ತಿ  ಸರ್ಕಾರ ಪ್ರತ್ಯೇಕತಾವಾದಿ ಮಸ್ರತ್ ಅಲಂ ಬಿಡುಗಡೆಗೊಳಿಸುವ ನಿರ್ಧಾರ ಪ್ರಕಟಿಸಿದಾಗ,
ಪಕ್ಷಗಳಲ್ಲಿಯೇ  ಭಿನ್ನ ಧ್ವನಿ ಕೇಳಿಬಂದಿತ್ತು. ಇದಕ್ಕೆ ಸಾಕಷ್ಟು ವಿರೋಧವೂ ಕೇಳಿಬಂದಿತ್ತು. ಈಗ ನಡೆದಿರುವ ಘಟನೆಯಿಂದ ಸರ್ಕಾರದ ದುರ್ಬಲತೆ ಎತ್ತಿತೋರಿಸುತ್ತಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ