ರೈಲು ದುರಂತ 
ದೇಶ

ಬ್ರೇಕ್ ವೈಫಲ್ಯ ದುರಂತಕ್ಕೆ ಕಾರಣ?

ಉತ್ತರ ಪ್ರದೇಶದ ರಾಯ್ ಬರೇಲಿ ಸಮೀಪ ನಡೆದ ರೈಲು ದುರಂತಕ್ಕೆ ಬ್ರೇಕ್ ವೈಫಲ್ಯವೇ ಕಾರಣ. ಹೀಗೆಂದು ರೈಲ್ವೆ ಇಲಾಖೆಯ ಮೂಲಗಳು...

ಲಖನೌ/ ನವದೆಹಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಸಮೀಪ ನಡೆದ ರೈಲು ದುರಂತಕ್ಕೆ ಬ್ರೇಕ್ ವೈಫಲ್ಯವೇ ಕಾರಣ. ಹೀಗೆಂದು ರೈಲ್ವೆ ಇಲಾಖೆಯ ಮೂಲಗಳು ಖಚಿತಪಡಿಸಿವೆ. ರೈಲಿನ ಲೋಕೋಮೋ ಟಿವ್ ಮತ್ತು ಕೋಚ್‍ಗಳ ನಡುವೆ ಇರುವ ಬ್ರೇಕ್ ಪೈಪ್ ಮುರಿದು ಹೋಗಿದ್ದರಿಂದ ದುರಂತಕ್ಕೆ ಕಾರಣಕ್ಕೆ ಎಂದು ಇಲಾಖೆಯ ಉನ್ನತ ಮೂಲಗಳ ಹೇಳಿಕೆ. ಆದರೂ ಮೇಲ್ನೋಟಕ್ಕೆ ಚಾಲಕ ಸಿಗ್ನಲ್ ಉಲ್ಲಂಘಿಸಿದ್ದೇ ಕಾರಣ. ಘಟನೆ ಬಗ್ಗೆ ಉತ್ತರ ವಲಯದ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಲಿದ್ದಾರೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ಇದಾದ ಬಳಿಕವೇ ಘಟನೆ ಬಗ್ಗೆ ಕಾರಣತಿಳಿದುಬರಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಇದೇ ವೇಳೆ, ಘಟನೆ ಬಗ್ಗೆ ರಾಷ್ಟ್ರಪತಿ, ಪ್ರಧಾನಿ, ಉ.ಪ್ರ.ಸಿಎಂ ಅಖಿಲೇಶ್  ಯಾದವ್ ಶೋಕ ವ್ಯಕ್ತಪಡಿಸಿದ್ದಾರೆ. ಪರಿಹಾರ: ಮೃತರ ಸಂಬಂಧಿಗಳಿಗೆ ರು 2 ಲಕ್ಷ  ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ರು. 50 ಸಾವಿರ ಪರಿಹಾರ ಪ್ರಕಟಿಸ ಲಾಗಿದೆ. ರೈಲು ದುರಂತದ ವಿಚಾರ ಉ.ಪ್ರ. ವಿಧಾನ ಸಭೆಯಲ್ಲಿ ಪ್ರಸ್ತಾಪವಾಗಿ ಗದ್ದಲ ಏರ್ಪ ಟ್ಟಿತು. ಬಿಎಸ್‍ಪಿ ಶಾಸಕರು ವಿಚಾರ ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!