ರಾಮೇಶ್ವರಂ: ಶ್ರೀಲಂಕಾದ ಜಲಪರಿಧಿಗೆ ಅಕ್ರಮವಾಗಿ ನುಸುಳಿದ ಆರೋಪದಲ್ಲಿ ತಮಿಳುನಾಡಿನ 29 ಮೀನುಗಾರರನ್ನು ಶ್ರೀಲಂಕಾ ನೌಕಾ ದಳ ಶನಿವಾರ ಬಂಧಿಸಿದೆ.
ಬಂಧಿತ ಮೀನುಗಾರರು ಜಲಸಂಧಿಯ ಬಳಿಯಿರುವ ಕಟ್ಚಾತೀವು ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಶ್ರೀಲಂಕಾ ನೌಕೌ ಪಡೆ ಸಿಬ್ಬಂದಿ ಅವರನ್ನು ಬಂಧಿಸಿದ್ದು, ಐದು ಹಡಗುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಮೀನುಗಾರರನ್ನು ಮನ್ನಾರ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದೆಂದು ಮೂಲಗಳು ತಿಳಿಸಿವೆ. ಕಟ್ಚಾತೀವು 1974 ರಲ್ಲಿ ಭಾರತವು ಶ್ರೀಲಂಕಕ್ಕೆ ನೀಡಿದ ಕಿರುದ್ವೀಪವಾಗಿದೆ.