ವಿವಾದಿತ ಪ್ರಚಾರ ಫಲಕದಲ್ಲಿನ ಚಿತ್ರ 
ದೇಶ

ಹುತಾತ್ಮ ದಿನದಂದೇ ಭಾರತೀಯ ಸೈನಿಕರಿಗೆ ಅಗೌರವ

ಹುತಾತ್ಮ ದಿನದಂದೇ ಭಾರತೀಯ ಯೋಧರಿಗೆ ಚಂಡೀಘಡ ಕಾರ್ಪೋರೇಷನ್ ಅಗೌರವ ಸೂಚಿಸಿದ್ದು, ಅಮೆರಿಕ ಯೋಧರನ್ನು ಭಾರತೀಯ ಸೈನಿಕರಂತೆ...

ಚಂಡೀಘಡ: ಹುತಾತ್ಮ ದಿನದಂದೇ ಭಾರತೀಯ ಯೋಧರಿಗೆ ಚಂಡೀಘಡ ಕಾರ್ಪೋರೇಷನ್ ಅಗೌರವ ಸೂಚಿಸಿದ್ದು, ಅಮೆರಿಕ ಸೇನಾಪಡೆಯ ಯೋಧರನ್ನು ಭಾರತೀಯ ಸೈನಿಕರಂತೆ ಬಿಂಬಿಸುವ ಭಿತ್ತಿ ಚಿತ್ರಗಳನ್ನು ಜಿಲ್ಲೆಯಾಧ್ಯಂತ ಪ್ರಚಾರ ಮಾಡಿದೆ.

ಹುತಾತ್ಮರ ದಿನಾಚರಣೆ ಸಂಬಂಧವಾಗಿ ಚಂಡೀಘಡ ಕಾರ್ಪೋರೇಷನ್ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದ ಅಂಗವಾಗಿ ಹಾಕಿಸಿದ್ದ ಬೃಹತ್ ಕಟೌಟ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಬೃಹತ್‌ ಜಾಹೀರಾತು ಫ‌ಲಕದಲ್ಲಿ ಭಾರತೀಯ ಸೈನಿಕರ ಬದಲು ಅಮೆರಿಕನ್‌ ಸೈನಿಕರನ್ನು ತೋರಿಸುವ ಮೂಲಕ ಕಾರ್ಪೋರೇಷನ್ ಪೇಚಿಗೆ ಸಿಲುಕಿದೆ. ಮುನಿಸಿಪಲ್‌ ಕಾರ್ಪೊರೇಶನ್‌ ಈ ಫ‌ಲಕವನ್ನು ಭಾನುವಾರವೇ ಹಾಕಿಸಿತ್ತು ಎಂದು ತಿಳಿದುಬಂದಿದೆ. ಆಶ್ಚರ್ಯದ ಸಂಗತಿ ಎಂದರೆ ಅಮೆರಿಕನ್‌ ಸೈನಿಕರ ಹಿಂಭಾಗದಲ್ಲಿದ್ದ ಅಮೆರಿಕದ ಧ್ವಜವನ್ನು ಕಾಣಿಸದಂತೆ ಮಾಡಿ ಅದರ ಜಾಗದಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಾಕಲಾಗಿತ್ತು. ಆದರೆ ಸೈನಿಕರ ಸಮವಸ್ತ್ರದ ಮೇಲೆ ಮಾತ್ರ ಅಮೆರಿಕದ ಲಾಂಛನವನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.



ಈ ಪ್ರಮಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚಂಡೀಘಡ ಮೇಯರ್ ಪೂನಮ್‌ ಶರ್ಮಾ ಅವರು, ಈ ಫ‌ಲಕದಲ್ಲಿ ಆಗಿರುವ ಪ್ರಮಾದದ ಬಗ್ಗೆ ತಮಗೇನೂ ತಿಳಿಯದು. ಹುತಾತ್ಮರ ದಿನಾಚರಣೆಯ ಆಹ್ವಾನ ಪತ್ರಿಕೆಯ ಕಾರ್ಡ್‌ ಪಡೆದಿರುವ ಯಾವೊಬ್ಬ ಸೇನಾಧಿಕಾರಿ ಕೂಡ ಈ ಫ‌ಲಕದಲ್ಲಿನ ಪ್ರಮಾದ ಬಗ್ಗೆ ತಮಗೇನೂ ಹೇಳಿಲ್ಲ ಎಂದು ಎಂದು ಹೇಳಿದ್ದಾರೆ. ಇನ್ನು ಈ ಫ‌ಲಕದ ವಿನ್ಯಾಸ ಮತ್ತು ಮುದ್ರಣವನ್ನು ಚಂಡೀಘಡ ಮುನಿಸಿಪಲ್‌ ಕಾರ್ಪೊರೇಶನ್‌ನ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಯೇ ಮಾಡಿಸಿದ್ದು, ಹುತಾತ್ಮರ ದಿನಾಚರಣೆಯಂದು ಸೈನಿಕರ ವಿಧವೆಯರನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಆದರೆ ಆಯೋಜಕರ ನಿರ್ಲಕ್ಷ್ಯದಿಂದಾಗಿ ಇದೀಗ ಸೈನಿಕರು ಮುಜುಗರಪಡುವಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT