ಜಿಂದ್: ಬಿಜೆಪಿ ಸರ್ಕಾರ ರೈತರನ್ನು ಕುಸಿಯುವಂತೆ ಮಾಡುತ್ತಿದೆ ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಭೂಪೇಂದರ್ ಸಿಂಗ್ ಹೂಡಾ ಆರೋಪಿಸಿದ್ದಾರೆ.
ಆರ್ಥಿಕವಾಗಿ ರೈತರನ್ನು ಕುಸಿಯುವಂತೆ ಬಿಜೆಪಿ ರಾಜ್ಯ ಸರ್ಕಾರ ಮಾಡುತ್ತಿದೆ. ರೈತರು ಆರ್ಥಿಕವಾಗಿ ಕುಸಿದರೆ, ತಾವು ಲಾಭ ಪಡೆಯಬಹುದು ಎಂಬ ದುರುದ್ದೇಶವನ್ನು ಬಿಜೆಪಿ ಸರ್ಕಾರ ಹೊಂದಿದೆ ಎಂದು ಅವರು ಆಪಾದಿಸಿದ್ದಾರೆ.
ರಾಜ್ಯದ ಕಬ್ಬು ಬೆಳೆಗಾರರು ತಮ್ಮ ಬೆಳೆಗಳನ್ನು ಮಿಲ್ ಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಈವರೆಗೆ ಅವರಿಗೆ ಬರಬೇಕಾದ ಹಣ ಬಂದಿಲ್ಲ. ಇದರಿಂದ ಅವರ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಇದರಲ್ಲಿ ಬಿಜೆಪಿ ಸರ್ಕಾರ ಕೈವಾಡವಿದೆ ಎಂದು ಸಿಂಗ್ ದೂರಿದ್ದಾರೆ.