ಭಾರತೀಯ ಯೋಧರ ಚಿತ್ರದ ಬದಲು ಅಮೆರಿಕ ಯೋಧರ ಚಿತ್ರ ಹಾಕಿದ ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ 
ದೇಶ

ಹುತಾತ್ಮರ ದಿನಾಚರಣೆ: ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಅಚಾತುರ್ಯ

ಹುತಾತ್ಮರ ದಿನದಂದು ಭಾರತೀಯ ಯೋಧರ ಚಿತ್ರ ಹಾಕುವ ಬದಲು ಅಮೆರಿಕ ಯೋಧರ ಚಿತ್ರವನ್ನು ಹಾಕುವುದರ ಮೂಲಕ ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ ಅಚಾತುರ್ಯದ ಕೆಲಸ ಮಾಡಿದೆ...

ನವದೆಹಲಿ: ಹುತಾತ್ಮರ ದಿನದಂದು ಭಾರತೀಯ ಯೋಧರ ಚಿತ್ರ ಹಾಕುವ ಬದಲು ಅಮೆರಿಕ ಯೋಧರ ಚಿತ್ರವನ್ನು ಹಾಕುವುದರ ಮೂಲಕ ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ ಅಚಾತುರ್ಯದ ಕೆಲಸ ಮಾಡಿದೆ.

ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ ರಸ್ತೆಗಳಲ್ಲಿ ಹಾಕಿರುವ ಫೋಟೋಗಳಲ್ಲಿ ಮೂವರು ಯೋಧರು ತಮ್ಮ ಸಮವಸ್ತ್ರದ ಮೇಲೆ ಅಮೆರಿಕಾದ ಧ್ವಜವನ್ನು ಹಾಕಿರುವುದು ಕಂಡುಬಂದಿದೆ. ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ ಅವರ ಈ ಅಚಾತುರ್ಯದ ಕೆಲಸಕ್ಕೆ ಅಲ್ಲಿನ ಸ್ಥಳೀಯರು ತೀವ್ರ ರೀತಿಯಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ, ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ ನ ಮೇಯರ್ ಪೂನಮ್ ಶರ್ಮಾ ಅವರು, ಚಿತ್ರವನ್ನು ಅಂತರ್ಜಾಲದ ಮೂಲಕ ತೆಗೆದುಕೊಳ್ಳಲಾಗಿದೆ. ಅಂತರ್ಜಾಲದ ಮೂಲಕ ಚಿತ್ರ ತೆಗೆದುಕೊಳ್ಳುವ ವೇಳೆ ತಪ್ಪಾಗಿರಬಹುದು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಹುತಾತ್ಮರ ದಿನದ ಅಂಗವಾಗಿ ಪಂಜಾಬ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧ್ಯಕ್ಷತೆ ವಹಿಸಲಿದ್ದರು. ಆದರೆ ಕಾರ್ಯಕ್ರಮದಲ್ಲಿ ಚಂಡೀಗಡ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಭಾರತೀಯ ಯೋಧರ ಚಿತ್ರ ಬದಲು ಅಮೆರಿಕಾ ಯೋಧರ ಚಿತ್ರ ಹಾಕುವ ಮೂಲಕ ತಮ್ಮ ಅಜಾಗರೂಕತೆ ಹಾಗೂ ಬೇಜವಾಬ್ದಾರಿತನದ ಕೆಲಸ ಮಾಡಿರುವುದು ಕಂಡುಬಂದಿದೆ.

ಈ ರೀತಿಯ ಕೆಲಸ ಅಧಿಕಾರಿಗಳ ಬೇಜಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ಅಧಿಕಾರಿಗಳ ಈ ಕೆಲಸ ಯೋಧರ ಮೇಲಿರುವ ಅಗೌರವವನ್ನು ಸೂಚಿಸುತ್ತದೆ. ಮೇಯರ್ ಆದವರು ಪ್ರತಿಯೊಂದು ಕೆಲಸದಲ್ಲಿಯೂ ಯಾವುದೇ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು. ತಪ್ಪು ಮಾಡಿ ಆದ ಮೇಲೆ ಸಬೂಬು ಹೇಳುವುದಲ್ಲ. ಮುನ್ಸಿಪಲ್ ಅಧಿಕಾರಿಗಳ ಬೇಜಾಬ್ದಾತನದ ಕೆಲಸ ಭಾರತೀಯರನ್ನು ಮುಜುಗರಕ್ಕೊಳಪಡುವಂತೆ ಮಾಡಿದೆ. ಹಾಗಾಗಿ ತಮ್ಮಿಂದಾದ ತಪ್ಪಿಗೆ ಮೇಯರ್  ಪೂನಮ್ ಶರ್ಮಾ ಸಾರ್ವಜನಿಕವಾಗಿ ಕ್ಷಮೆಯಾಚಿಬೇಕು ಎಂದು ಚಂಡೀಗಡದ ಬಿಜೆಪಿಯ ಶಾಸಕ ಕಿರಣ್ ಖೇರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT