ಬೀಜಿಂಗ್: ಹಿಮಾಲಯದ ಗಡಿ ಭಾಗದಲ್ಲಿ ಶಾಂತಿ ಕಾಪಾಡಲು ಚೀನಾ ಒಪ್ಪಿಗೆ ಸೂಚಿಸಿದೆ.
ಗಡಿ ಭಾಗದಲ್ಲಿ ಶಾಂತಿ ಕಾಪಾಡಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿದೆ.
ಎರಡೂ ದೇಶಗಳ ಗಡಿಯಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ನುಸುಳುವಿಕೆಯ ಪ್ರಕರಣಗಳು ನಡೆದಲ್ಲಿ ಎರಡೂ ದೇಶಗಳ ವಿದೇಶಾಂಗ ಕಚೇರಿಗಳ ನಡುವೆ ಸಕಾಲಿಕ ಸಂಪರ್ಕ ಸೌಲಭ್ಯಗಳನ್ನು ಈ ಚೌಕಟ್ಟಿನಲ್ಲಿ ಒಳಪಡಿಸಲಾಗಿದೆ.
ಸೋಮವಾರ ಚೀನಾ ಸಚಿವಾಲಯ ಪ್ರಕಟಣೆಯೊಂದನ್ನು ಬಿಡುಗಡೆಗೊಳಿಸಿದ್ದು, ಹಿಮಾಲಯ ಪರ್ವತದ ಗಡಿ ಭಾಗದಲ್ಲಿ ಶಾಂತಿ ಮತ್ತು ಸೌರ್ಹಾಧ ಕಾಪಾಡಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಲಾಗಿದೆ.