ಜಮ್ಮು-ಕಾಶ್ಮೀರ: ಬಂದೂಕಿನಿಂದ ಕಾಶ್ಮೀರ ವಿವಾದ ಬಗೆಹರಿಯಲ್ಲ ಎಂದು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.
ಕಾಶ್ಮೀರ ವಿವಾದವನ್ನು ಬಂದೂಕು ಹಿಡಿದು ಬಗೆಹರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಡೆದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಮಾತುಕತೆಯಿಂದ ಬಗೆಹರಿಸಬೇಕು ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಮಾತುಕತೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋನ ಎಂದು ನಾನು ಹೇಳುತ್ತಾ ಬಂದಿದ್ದೇನೆ. ಅದೇ ಹೇಳಿಕೆಯನ್ನಾ ಈಗ ಪಿಡಿಪಿ ನೀಡುತ್ತಿದೆ. ಆದರೆ, ಈ ಹೇಳಿಕೆಗಳು ಹೊಸದೇನು ಅಲ್ಲ ಎಂದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆಗಳಲ್ಲಿ ನನ್ನ ಭಾಷಣದಲ್ಲಿ ಈ ವಿವಾದವನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಲೋನ ಎಂದು ಹೇಳುತ್ತಾ ಬಂದಿದ್ದೇನೆ. ಈಗಲೂ ಹೇಳುತ್ತೇನೆ, ಬಂದೂಕು ಹಿಡಿದು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದರೆ, ಅದರಿಂದ ಪರಿಹಾರ ಸಿಗುವುದಿಲ್ಲ ಎಂದು ಒಮರ್ ನುಡಿದಿದ್ದಾರೆ.