ನವದೆಹಲಿ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಬಿಹಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮಾತ್ರವಲ್ಲದೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಪ್ರಧಾನಿಯವರಲ್ಲಿ ಬೇಡಿಕೆಯನ್ನಿಟ್ಟಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಬಿಹಾರ ಕೇಂದ್ರ ಸರ್ಕಾರದಿಂದ ಏನು ಬಯತ್ತಿದೆ ಎಂಬುದರ ಬಗ್ಗೆ ನಿತೀಶ್ ಪ್ರಧಾನಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಬಿಹಾರಕ್ಕೆ ನೀಡಿದ್ದ ಹಲವಾರು ಯೋಜನೆಗಳ ಕಾಲಾವಧಿ ಮುಗಿಯುತ್ತಾ ಬಂದಿರುವ ಕಾರಣ ಬಿಹಾರ ನಷ್ಟ ಅನುಭವಿಸುತ್ತಿದೆ. ಆದ್ದರಿಂದ ರಾಜ್ಯದ ಅಭಿವೃದ್ಧಿಗೆ ಉತ್ತೇಜನ ನೀಡಬೇಕೆಂದು ನಿತೀಶ್ ಮನವಿ ಮಾಡಿದ್ದಾರೆ.
ಆದಾಗ್ಯೂ, ಈ ಮಾತುಕತೆ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಶೆಹನವಾಜ್ ಹುಸೈನ್ ಹೇಳಿದ್ದಾರೆ.