ಚೆನ್ನೈ: ಇದುವರೆಗೆ ಕಾವೇರಿ ನೀರಿನ ಬಗ್ಗೆ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಕ್ಯಾತೆ ತೆಗೆಯುತ್ತಿದ್ದವು. ಇದೀಗ ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ನಿರ್ಮಿಸಲು ಉದ್ದೇಶಿಸಲಿರುವ ಸಣ್ಣ ಅಣೆಕಟ್ಟಿಗೆ ತಮಿಳುನಾಡಿನ ಸಂಘಟನೆಗಳು, ರಾಜಕೀಯ ಪಕ್ಷಗಳು ಅಪಸ್ವರ ಎತ್ತಿವೆ.
ಪ್ರಸ್ತಾವಿತ ಯೋಜನೆ ಖಂಡಿಸಿ ಮಾ.28ರಂದು ಬಂದ್‍ಗೆ ಕರೆ ನೀಡಲಾಗಿದೆ. ಇದರಿಂದಾಗಿ 2 ರಾಜ್ಯಗಳ ನಡುವೆ ಬಸ್ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಕರ್ನಾಟಕ ಸರ್ಕಾರದ ನಿರ್ಧಾರ ಕಾನೂನಿಗೆ ವಿರೋಧ ಎನ್ನುವುದು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇ.ವಿ.ಕೆ.ಎಸ್. ಇಳಂಗೋವನ್ ಆರೋಪ. ಅಣೆಕಟ್ಟು ನಿರ್ಮಿಸುವ ಮೂಲಕ ನೆರೆಯ ರಾಜ್ಯ ಸರ್ಕಾರ ಒಪ್ಪಂದ ಉಲ್ಲಂಘಿಸಿದೆ ಎನ್ನುವುದು ಅವರ ವಾದ.