ಏರ್‍ಇಂಡಿಯಾ ವಿಮಾನ ಹೈಜಾಕ್‍ಗೆ ಪಾಕ್ ಯತ್ನ? 
ದೇಶ

ಏರ್‍ಇಂಡಿಯಾ ವಿಮಾನ ಹೈಜಾಕ್‍ಗೆ ಪಾಕ್ ಯತ್ನ?

ನೌಕಾಪಡೆಯ ವರ್ಷ ಯೋಜನೆಗೆ ಕಣ್ಣು ಹಾಕಿದ್ದ ಪಾಕಿಸ್ತಾನ ಈಗ, ಏರ್‍ಇಂಡಿಯಾ ವಿಮಾನ ಹೈಜಾಕ್ ಮಾಡಲು ಯತ್ನಿಸಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ...

ರೋಗಿ- ವೈದ್ಯರಂತೆ ವಿಮಾನ ಪ್ರವೇಶಿಸಿದ್ದ ಪಾಕಿಸ್ತಾನಿ ನಾಗರಿಕರು

ನವದೆಹಲಿ:
ನೌಕಾಪಡೆಯ ವರ್ಷ ಯೋಜನೆಗೆ ಕಣ್ಣು ಹಾಕಿದ್ದ ಪಾಕಿಸ್ತಾನ ಈಗ, ಏರ್‍ಇಂಡಿಯಾ ವಿಮಾನ ಹೈಜಾಕ್ ಮಾಡಲು ಯತ್ನಿಸಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅದೂ ರೋಗಿ ಮತ್ತು ವೈದ್ಯರಂತೆ ನಟಿಸಿಕೊಂಡು! ಲಂಡನ್‍ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಪ್ರಯತ್ನ ನಡೆದಿದೆ.

ಐವರು ಪಾಕಿಸ್ತಾನಿ ನಾಗರಿಕರು ಈ ಕೃತ್ಯ ಎಸಗಲು ಯತ್ನಿಸಿದ್ದರು. ಅವರಲ್ಲೊಬ್ಬ ಆರಂಭದಲ್ಲಿ ರೋಗಿಯಂತೆ ನಟಿಸಿದ. ಇತರ ನಾಲ್ವರು ವೈದ್ಯರಂತೆ ಸೋಗು ಹಾಕಿಕೊಂಡು ಅವನನ್ನು ಪರೀಕ್ಷೆ ಮಾಡುವಂತೆ ನಟನೆ ಮಾಡಿದರು. ಇದಾದ ಬಳಿಕ ಅವರು ಕಾಕ್‍ಪಿಟ್‍ಗೆ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿ, ಅಲ್ಲಿ ಕ್ಯಾಪ್ಟನ್‍ನನ್ನು ಭೇಟಿ ಮಾಡಬೇಕೆಂದು ತಿಳಿಸಿದರು.ಆದರೆ ಭದ್ರತಾ ಸಿಬ್ಬಂದಿ ಅದಕ್ಕೆ ಒಪ್ಪಲಿಲ್ಲ. ಆದರೂ, ಪಟ್ಟು ಬಿಡದ ಪಾಕಿಸ್ತಾನಿ ನಾಗರಿಕರು ಭೇಟಿ ಮಾಡಿಯೇ ಸಿದ್ಧ ಎಂದರು. ಭದ್ರತಾ ಸಿಬ್ಬಂದಿ ಮತ್ತು ಕ್ಯಾಪ್ಟನ್ ಆ ರೀತಿ ಭೇಟಿ ಸಾಧ್ಯವೇ ಇಲ್ಲ ಎಂದು ಖಡಕ್ ಆಗಿ ಹೇಳಿದ ಬಳಿಕ ಪಾಕಿಸ್ತಾನಿ ನಾಗರಿಕರು ಸುಮ್ಮನಾದರು.

ನಕಲಿ ಪಾಸ್‍ಪೋರ್ಟ್?: ವಿಮಾನದಲ್ಲಿ ಈ ಘಟನೆ ನಡೆದ ಬಳಿಕ ಏರ್ ಇಂಡಿಯಾ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ಐವರು ಪಾಕಿಸ್ತಾನಿ ನಾಗರಿಕರ ಪಾಸ್‍ಪೋರ್ಟ್ ನಲ್ಲಿದ್ದ ದೂರವಾಣಿ ಸಂಖ್ಯೆಗಳಿಗೆ ಡಯಲ್ ಮಾಡಿದರು. ಆದರೆ, ಅವುಗಳು ನಕಲಿ ಸಂಖ್ಯೆಗಳೆಂದು ಗೊತ್ತಾಗಿದೆ. ಇದರಿಂದಾಗಿ ಆ ಐವರು ನಕಲಿ ಪಾಸ್‍ಪೋರ್ಟ್ ಬಳಸಿ ಲಂಡನ್‍ನಿಂದ ದೆಹಲಿಗೆ ಪ್ರಯಾಣಿಸಿದ್ದರೇ ಎಂದು ಶಂಕೆ ಶುರು ವಾಗಿದೆ. ವಿಮಾನ ತಪಾಸಣೆಯನ್ನೂ ನಡೆಸಲಾಯಿತು.

ಎಚ್ಚರಿಕೆ ರವಾನೆ: ಏರ್ ಇಂಡಿಯಾ, ಡಿಜಿಸಿಎ ಹೈಜಾಕ್ ಯತ್ನ ನಡೆದಿತ್ತು ಎಂಬ ವರದಿಯನ್ನು ತಳ್ಳಿಹಾಕಿದೆ. ಆದರೆ ಅಧಿಕೃತ ಸಿಬ್ಬಂದಿ ಹೊರತು ಪಡಿಸಿ ಬೇರ್ಯಾರಿಗೂ ಕಾಕ್‍ಪಿಟ್ ಪ್ರವೇಶಕ್ಕೆ ಅವಕಾಶ ನೀಡಬಾ ರದು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇರಿಸಬೇಕೆಂದು ಸರ್ಕಾರಿ ಮತ್ತು ಖಾಸಗಿ ವೈಮಾನಿಕ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಐದು ವರ್ಷಗಳ ಹಿಂದೆಯೇ ನಿಯಮ
ಜರ್ಮನ್‍ವಿಂಗ್ಸ್‍ನ ವಿಮಾನವನ್ನು ಸಹ ಪೈಲಟ್ ಅಪಘಾತಕ್ಕೆ ಈಡು ಮಾಡಿದ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳು ಕಾಕ್‍ಪಿಟ್ ಪ್ರವೇಶಕ್ಕೆ ಈಗ ಕಠಿಣ ನಿಯಮಗಳನ್ನು ರೂಪಿಸಿವೆ. ಜತೆಗೆ ಪೈಲಟ್, ಸಹ ಪೈಲಟ್ ಜತೆಗೆ ವಿಮಾನ ಇತರ ಸಿಬ್ಬಂದಿ ಇರಬೇಕು ಎಂಬ ನಿಯಮ ಜಾರಿಗೆ ತರುತ್ತಿವೆ. ಆದರೆ ಭಾರತದಲ್ಲಿ ಈ ನಿಯಮ 2010ರಲ್ಲೇ ಜಾರಿಗೆ ಬಂದಿತ್ತು. ಅದಕ್ಕೂ ಒಂದು ಕಾರಣವಿದೆ. ದುಬೈನಿಂದ ಪುಣೆಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್‍ನ ಪೈಲಟ್ ಶೌಚಾಲಯಕ್ಕೆ ತೆರಳಿದ್ದ. ಈ ವೇಳೆಗೆ ಕಾಕ್‍ಪಿಟ್‍ನಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ವಿಮಾನ ಸಮತೋಲನ ತಪ್ಪಿತ್ತು. ಅಪಾಯ ಅರಿತ ಸಹ ಪೈಲಟ್ ಕಾಕ್‍ಪಿಟ್ ಬಾಗಿಲು ತೆರೆಯಲು ಯತ್ನಿಸಿದಾಗ ಲಾಕ್
ಆಗಿತ್ತು. ಬಾಗಿಲು ಮುರಿದು ವಿಮಾನವನ್ನು ನಿಯಂತ್ರಣಕ್ಕೆ ತಂದಿದ್ದ. ಬಳಿಕ ಡಿಜಿಸಿಎ ಪೈಲಟ್‍ಗಳ ಜತೆ ಇನ್ನಿಬ್ಬರು ಕಾಕ್‍ಪಿಟ್ ಬಳಿ ಇರಬೇಕು ಎಂದು ತಾಕೀತು ಮಾಡಿತ್ತು.

ನನ್ನ ಹೆಸರು ಎಲ್ಲರಿಗೂ ಗೊತ್ತಾಗುತ್ತೆ

150 ಮಂದಿಯ ಸಾವಿಗೆ ಕಾರಣನಾದ ಸಹ ಪೈಲಟ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಆತನ ಮಾಜಿ ಪ್ರೇಯಸಿ ಈ ಅಂಶ ಬಹಿರಂಗಪಡಿಸಿದ್ದಾಳೆ. ಇಷ್ಟು ಮಾತ್ರವಲ್ಲದೆ ಆತ ಒಂದು ಸಂದರ್ಭದಲ್ಲಿ `ಒಂದು ದಿನ ನಾನು ಮಾಡಿದ ಕೃತ್ಯ ವಿಶ್ವದ ಜನ ನಿಬ್ಬೆರಗಾಗುವಂತೆ ಮಾಡುತ್ತದೆ ಮತ್ತು ನನ್ನ ಹೆಸರು ಎಲ್ಲರಿಗೂ ತಿಳಿಯುತ್ತದೆ' ಎಂದು ವರ್ಷದ ಹಿಂದೆ ಆತ ನನಗೆ ಹೇಳಿದ್ದ ಎಂದು ಮರಿಯಾ ಹೇಳಿದ್ದಾರೆ. ಕಾಯಿಲೆಯಿಂದಾಗಿ ಲುಫ್ತಾನ್ಸ ವಿಮಾನದಲ್ಲಿ ಪೈಲೆಟ್ ಆಗುವ ಆತನ ಕನಸು ಈಡೇರಲ್ಲ ಎಂದು ತಿಳಿದಿದ್ದರಿಂದ ಆತ ಈ ಕೃತ್ಯ ಎಸಗಿರಬಹುದು ಎಂದು ಆಕೆ ತಿಳಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!