ರಾಜ್ಯಸಭೆ 
ದೇಶ

ಭೂಸ್ವಾಧೀನ ವಿಧೇಯಕ ಪ್ರಾದೇಶಿಕ ಪಕ್ಷಗಳತ್ತ ಕಣ್ಣು

ಭೂಸ್ವಾಧೀನ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕೇಂದ್ರ ಸರ್ಕಾರ ಈಗ ಸಣ್ಣಪುಟ್ಟ ಪಕ್ಷಗಳನ್ನು ತನ್ನತ್ತ ...

ನವದೆಹಲಿ: ಭೂಸ್ವಾಧೀನ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕೇಂದ್ರ ಸರ್ಕಾರ ಈಗ ಸಣ್ಣಪುಟ್ಟ ಪಕ್ಷಗಳನ್ನು ತನ್ನತ್ತ ಸೆಳೆದುಕೊಳ್ಳಲು ಯತ್ನಿಸುತ್ತಿದೆ. ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆಯುವುದು ಸುಲಭವಲ್ಲ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಸರ್ಕಾರ ಈ ಹೆಜ್ಜೆಯಿಟ್ಟಿದೆ. ಸಮಾಜವಾದಿ ಪಕ್ಷ, ಶಿವಸೇನೆ, ಬಿಜೆಡಿ ಮತ್ತಿತರ ಪ್ರಾದೇಶಿಕ  ಪಕ್ಷಗಳ ಬೆಂಬಲ ಪಡೆದು ವಿಧೇಯಕಕ್ಕೆ ಹಸಿರು ನಿಶಾನೆ ಪಡೆಯುವುದು ಸರ್ಕಾರದ ಉದ್ದೇಶ.ಕಾಂಗ್ರೆಸ್ ಮತ್ತು ಎಡಪಕ್ಷಗಳು ಯಾವ ಕಾರಣಕ್ಕೂ ವಿಧೇಯಕಕ್ಕೆ ಬೆಂಬಲ ನೀಡು ವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ರಾಜ್ಯಸಭೆಯಲ್ಲಿ ಈ ಪಕ್ಷಗಳ ಒಟ್ಟು ಬಲಾಬಲ 79. 244 ಸದಸ್ಯ ಬಲದ ರಾಜ್ಯಸಭೆಯಲ್ಲಿ ಇತರೆ ಪ್ರಾದೇಶಿಕ ಪಕ್ಷಗಳ 54 ಮಂದಿ ಸದಸ್ಯರಿದ್ದಾರೆ. ಇವರೆಲ್ಲ ಬೆಂಬಲ ನೀಡಿದರೆ ಎನ್‍ಡಿಎ ಹಾದಿ ಸುಗಮ ವಾಗುತ್ತದೆ.ಹಾಗಾಗಿ ರೈತರಿಗೆ ಭೂಸ್ವಾಧೀನ ವನ್ನು ತಿರಸ್ಕರಿಸುವ ಸ್ವಲ್ಪಮಟ್ಟಿನ ಹಕ್ಕು ಸೇರಿದಂತೆ ವಿಧೇಯಕದಲ್ಲಿ ಇನ್ನಷ್ಟು ಬದಲಾವಣೆ ತಂದು ಈ ಪಕ್ಷಗಳ ಬೆಂಬಲ ಪಡೆಯಲು ಸರ್ಕಾರ ಮುಂದಾಗಿದೆ. ಎಸ್ಪಿ ನಾಯಕರು ಸ್ವಾಧೀನ ಪ್ರಕ್ರಿಯೆ ಯನ್ನು ಸರಳಗೊಳಿಸುವ ಬೇಡಿಕೆಯನ್ನು ಇಟ್ಟಿದ್ದಾರೆ. ಅವರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 7 ಸಂಸದರನ್ನು ಹೊಂದಿರುವ ಬಿಜೆಡಿ ಕೂಡ ವಿಧೇಯಕಕ್ಕೆ ಬೆಂಬಲ ಸೂಚಿಸಿದೆ. ಇನ್ನು ತೃಣಮೂಲ ಕಾಂಗ್ರೆಸ್, ಜೆಡಿಯು ಸೇರಿ ಕೆಲ ಪಕ್ಷಗಳ ಮನವೊಲಿಸಲು ಬಾಕಿಯಿದೆ. ಅವರು ಕನಿಷ್ಠಪಕ್ಷ ಮತದಾನದಿಂದ ದೂರವುಳಿದರೂ ಸಾಕಾಗುತ್ತದೆ ಎಂದೂ ಮೂಲಗಳು ಹೇಳಿವೆ.ಮುಂದಿನ ವಾರ ಸರ್ಕಾರ ಭೂಸ್ವಾಧೀನಕ್ಕೆ ಸಂಬಂಧಿಸಿ ಹೊಸ ಸುಗ್ರೀ ವಾಜ್ಞೆ  ತರಲಿದ್ದು, ಏ.20ರಿಂದ ಆರಂಭ ವಾಗುವ ಅಧಿವೇಶನದ ಮುಂದಿನ ಭಾಗ ದಲ್ಲಿ ಅದು ಮತ್ತೆ ಮಂಡನೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!