ನವದೆಹಲಿ: ಸೋಮವಾರ ಹೊರಬಿದ್ದ `ಸಿಗರೇಟ್ ವರದಿ' ಮಂಗಳವಾರ `ಹೊಗೆ' ಯಾಡಲಾರಂಭಿಸಿದೆ.ಸಿಗರೇಟ್ ಸೇವನೆಗೂ, ಕ್ಯಾನ್ಸರ್‍ಗೂ ಸಂಬಂಧವಿಲ್ಲ ಎಂಬ ಬಿಜೆಪಿ ಸಂಸದ ದಿಲೀಪ್ ಕೆ. ಗಾಂಧಿ ನೇತೃತ್ವದ ಸಂಸದೀಯ ಸಮಿತಿ ಶಿಫಾರಸಿನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಸಮಿತಿ ಸದಸ್ಯರೂ ಆಕ್ಷೇಪವೆತ್ತಿದ್ದಾರೆ.
ವರದಿ ಕೇಂದ್ರ ಸರ್ಕಾರಕ್ಕೂ ಮುಜುಗರ ಉಂಟು ಮಾಡಿದ್ದು, ಪ್ರತಿಪಕ್ಷ ಹಾಗೂ ವೈದ್ಯ ವಲಯದಿಂದ ಟೀಕೆಗಳ ಸುರಿಮಳೆ ಆಗಿದೆ.
ವರದಿಯಲ್ಲೇನಿತ್ತು?
ಸೋಮವಾರ ಡಿ.ಕೆ.ಗಾಂಧಿ ನೇತೃತ್ವದ ಸಮಿತಿ ಕೇಂದ್ರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಿತ್ತು. `ತಂಬಾಕು ಪದಾರ್ಥಗಳ ಹಾನಿ ಬಗ್ಗೆ ನಡೆದ ಎಲ್ಲ ಅಧ್ಯಯನಗಳೂ ವಿದೇಶ
ಗಳಲ್ಲಿ ಕೈಗೊಂಡಿದ್ದು. ನಮ್ಮ ದೇಶದಲ್ಲಿ ನಡೆದ ಯಾವ ಅಧ್ಯಯನವೂ ಸಿಗರೇಟ್ ನಿಂದ ಕ್ಯಾನ್ಸರ್ ಬರುತ್ತದೆ ಎಂದು ಸಾಬೀತುಪಡಿಸಿಲ್ಲ. ಹಾಗಾಗಿ ಸಿಗರೇಟ್ ಪ್ಯಾಕೆಟ್
ಗಳಲ್ಲಿನ ಎಚ್ಚರಿಕೆ ಚಿತ್ರ ಶೇ.40ರಿಂದ ಶೇ.85 ಕ್ಕೆ ಏರಿಸುವ ಪ್ರಸ್ತಾಪಕ್ಕೆ ತಡೆಯೊಡ್ಡಬೇಕು. ಕ್ಯಾನ್ಸರ್ ಕೇವಲ ತಂಬಾಕು ಪದಾರ್ಥ ಸೇವನೆಯಿಂದಷ್ಟೇ ಬರುವುದಿಲ್ಲ' ಎಂದು
ವರದಿಯಲ್ಲಿ ಹೇಳಲಾಗಿತ್ತು.
ಮೂರ್ಖ, ಹೆಡ್ಡ !
ಶಿಫಾರಸು ಸಲ್ಲಿಕೆ ಆಗುತ್ತಿದ್ದಂತೆಯೇ ಸಮಿತಿಯ ವರದಿ ಭಾರಿ ವಿವಾ ದಕ್ಕೆ ಕಾರಣವಾಗಿದೆ. ವರದಿ ಬಗ್ಗೆ ಕೆಂಡಕಾರಿರುವ ನಾಯಕರು ಸಮಿತಿ ಮುಖ್ಯಸ್ಥ ದಿಲೀಪ್ ಗಾಂಧಿ ಅವರನ್ನು `ಮೂರ್ಖ', `ಹೆಡ್ಡ' ಎಂದು ಜರೆದಿದ್ದಾರೆ. ಅಚ್ಚರಿ ಎಂದರೆ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರೂ ವರದಿ ಯನ್ನು ವಿರೋಧಿಸಿದ್ದಾರೆ. `ವಿಜ್ಞಾನ ಯಾವ
ತ್ತಿಗೂ ವಿಜ್ಞಾನವೇ. ಅದರೊಂದಿಗೆ ರಾಜಿ ಮಾಡಿಕೊಳ್ಳಲಾಗದು' ಎಂದಿದ್ದಾರೆ . ಇದೇ ವೇಳೆ, ಮೋದಿ ಸರ್ಕಾರವು ತಂಬಾಕು ಉತ್ಪಾದನಾ ಕಂಪನಿಗಳ ಪರವಾಗಿ ಕಾರ್ಯ
ನಿರ್ವಹಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರೂ ಸಮಿತಿಯ ಶಿಫಾರಸು ಆಘಾತಕಾರಿ ಎಂದು ಬಣ್ಣಿಸಿದ್ದಾರೆ.
ಭಾರತೀಯ ಕ್ಯಾನ್ಸರ್ ಸೊಸೈಟಿ ಕೂಡ ಸಮಿತಿ ಶಿಫಾರಸು ಹಾಸ್ಯಾಸ್ಪದ ಎಂದಿದೆ.