ನವದೆಹಲಿ: ಬಂಡಾಯ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಆಮ್ ಆದ್ಮಿ ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿದೆ. ಈ ಇಬ್ಬರು ನಾಯಕರನ್ನು ಈಗಾಗಲೇ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯತ್ವದಿಂದ ಹಾಗೂ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಉಚ್ಚಾಟಿಸಲಾಗಿತ್ತು.
ಕಳೆದ ಚುನಾವಣೆ ವೇಳೆ ಪಕ್ಷದ ಪ್ರಮುಖ ವಕ್ತಾರರಾಗಿದ್ದ ಅತಿಶ್ ಮರ್ಲೆನಾ, ಅನಂದ್ ಕುಮಾರ್ ಮತ್ತು ಮಯಾಂಕ್ ಗಾಂಧಿ ಅವರನ್ನು ಸಹ ವಕ್ತಾರ ಹುದ್ದೆಯಿಂದ ತೆಗೆದು ಹಾಕಲಾಗಿದೆ.
ಹೊಸದಾಗಿ 20 ವಕ್ತಾರ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಸಂಜಯ್ ಸಿಂಗ್, ಕುಮಾರ್ ವಿಶ್ವಾಸ್, ಇಲಿಯಾಸ್ ಅಝ್ಮಿ, ಪಂಕಜ್ ಗುಂಪ್ತಾ, ಆಶುತೋಷ್ ಮತ್ತು ಆಶಿಶ್ ಕೇತನ್ ಸೇರಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹಲವು ಆಪ್ತರಿಗೆ ಸ್ಥಾನ ನೀಡಲಾಗಿದೆ.