ದಿಯೊಗಢ(ಜಾರ್ಖಂಡ್): ಸಪ್ತಪದಿ ತುಳಿದು ಮನೆಗೆ ವಾಪಸಾಗುತ್ತಿದ್ದ ನವ ವಧು ವರರ ವಾಹನ ಅಪಘಾತಕ್ಕೀಡಾದ ಪರಿಣಾಮ ವಧು ವರ ಸೇರಿ 10 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ದಿಯೊಗಢ ಜಿಲ್ಲೆಯ ದೋಮಾರ್ಥ್ ಸಮೀಪ ಮದುವೆ ವಾಹನ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ 10 ಮಂದಿ ಸಾವನ್ನಪ್ಪಿದ್ದು, 4 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ದಿಯೊಗಢ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದುವೆ ಮುಗಿಸಿಕೊಂಡು ಮೋಹನಪುರದಿಂದ ಆಂದ್ರಗದರ್‌ಗೆ ಮರಳುತ್ತಿದ್ದ ವಾಹನಕ್ಕೆ ಎದುರಿಗೆ ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಮುರುಗನ್ ಅವರುತ ತಿಳಿಸಿದ್ದಾರೆ.