ಕೇಂದ್ರ ಸಚಿವ ನಿತಿನ್ ಗಡ್ಕರಿ 
ದೇಶ

ಮೂತ್ರ ಹರಿಸಿ ಗಿಡ ಬೆಳೆಸಿ: ನಿತಿನ್ ಗಡ್ಕರಿ

ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ದೆಹಲಿ ಬಂಗಲೆಯ ಕೈತೋಟ ಹಸಿರಿನಿಂದ ನಳನಳಿಸುತ್ತಿರುವುದರ ಹಿಂದಿನ ರಹಸ್ಯವೇನು ಗೊತ್ತೆ?...

ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ದೆಹಲಿ ಬಂಗಲೆಯ ಕೈತೋಟ ಹಸಿರಿನಿಂದ ನಳನಳಿಸುತ್ತಿರುವುದರ ಹಿಂದಿನ ರಹಸ್ಯವೇನು ಗೊತ್ತೆ?

ಅವರು ತೋಟಕ್ಕೆ ನೀರಿನ ಬದಲಿಗೆ ತಮ್ಮ ಮೂತ್ರವನ್ನೇ ಹರಿಸಿ ಗಿಡಗಳನ್ನು ಪೋಷಿಸುತ್ತಿದ್ದಾರೆ. ಇದು ಗಾಳಿಸುದ್ದಿಯೋ ಕುಚೋದ್ಯವೋ ಅಲ್ಲ. ಅವರೇ ಬಹಿರಂಗಪಡಿಸಿದ ಸತ್ಯ. ನಾಗಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತ ಗಡ್ಕರಿ, ಮೂತ್ರದಂಥ ಅಗ್ಗದ ಗೊಬ್ಬರ ಇನ್ನೊಂದಿಲ್ಲ. ಹಾಗಾಗಿ ತಾವು ಪ್ರತಿದಿನ ತಮ್ಮ ಗಾರ್ಡನ್‍ನ ಗಿಡಗಳಿಗೆ ಮೂತ್ರಧಾರೆ ಎರೆಯುವುದಾಗಿ ಹೇಳಿಕೊಂಡು ಭಾರಿ ವಿವಾದಕ್ಕೆ ಎಡೆಮಾಡಿ ಕೊಟ್ಟಿದ್ದಾರೆ.

ಈಗಾಗಲೇ ಟ್ವಿಟರ್ ಮತ್ತು ಫೇಸ್‍ಬುಕ್‍ನಲ್ಲಿ ಈ ಹೇಳಿಕೆಗೆ ಅಪಾರ ಸಂಖ್ಯೆಯಲ್ಲಿ ವಿರೋಧಗಳು ಹರಿದು ಬಂದಿದ್ದು, ಗಡ್ಕರಿ ಮಾತು ಗೇಲಿಗೊಳಗಾಗಿದೆ. 50ಲೀಟರಿನ ಕ್ಯಾನಿನಲ್ಲಿ ತಮ್ಮ ಮೂತ್ರ ಶೇಖರಿಸಿಟ್ಟಿದ್ದ ಗಡ್ಕರಿ, ಅದನ್ನೇ ಗಿಡಗಳಿಗೆ ಹರಿಸಿದ್ದರಿಂದ, ಗಿಡಗಳ ಬೆಳವಣಿಗೆಯಲ್ಲಿ ವೇಗ ಕಂಡುಬಂದಿದೆ ಎಂದೂ ಅವರು ಸಮರ್ಥಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ