ನರೇಂದ್ರ ಮೋದಿ 
ದೇಶ

ಚೀನಾ ಜಾಲತಾಣದಲ್ಲಿ ಮೋದಿ ಖಾತೆ

ಚೀನಾ ಭೇಟಿ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾದ ಪ್ರಖ್ಯಾತ ಸಾಮಾಜಿಕ ಜಾಲತಾಣ `ಸಿನಾ ವೈಬೋ'ನಲ್ಲಿ ಅಕೌಂಟ್ ತೆರೆದಿದ್ದಾರೆ...

ಬೀಜಿಂಗ್: ಚೀನಾ ಭೇಟಿ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾದ ಪ್ರಖ್ಯಾತ ಸಾಮಾಜಿಕ ಜಾಲತಾಣ `ಸಿನಾ ವೈಬೋ'ನಲ್ಲಿ ಅಕೌಂಟ್ ತೆರೆದಿದ್ದಾರೆ.

ಈ ಮೈಕ್ರೋಬ್ಲಾಗ್ ಸುಮಾರು 50 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಮೋದಿ ಅವರು ಈ ಜಾಲತಾಣವನ್ನು ಸೇರಿದ ಮೊದಲ ಭಾರತೀಯ ಆಗಿದ್ದಾರೆ. ಅವರು ಮೇ 14ರಿಂದ 16ರವರೆಗೆ ಚೀನಾಗೆ ಪ್ರವಾಸ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚೀನಾದ ಜನರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಜಾಲತಾಣಕ್ಕೆ ಸೇರಿ ಕೊಂಡಿದ್ದಾರೆ.

`ಹೆಲೋ ಚೀನಾ. ವೈಬೋ ಮೂಲಕ ಚೀನಾದ ಸ್ನೇಹಿತರೊಂದಿಗೆ ಸಂವಹನ ನಡೆಸಲು ಉತ್ಸುಕನಾಗಿದ್ದೇನೆ' ಎಂದು ಮೋದಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರು `ವೈಬೋ'ದಲ್ಲಿ ಖಾತೆ ತೆರೆದ ಒಂದು ಗಂಟೆಯಲ್ಲೇ 7 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಚೀನಾದಿಂದ ಸ್ವಾಗತದ ಮಹಾಪೂರ ಹರಿದುಬಂದಿದೆ.

`ಮತ್ತೊಬ್ಬ ಅಂತಾರಾಷ್ಟ್ರೀಯ ನಾಯಕ ವೈಬೋ ಸೇರಿದ್ದಾರೆ' ಎಂದು ಒಬ್ಬರು ಪೋಸ್ಟ್ ಮಾಡಿದ್ದರೆ, ಇನ್ನೊಬ್ಬರು ಮೋದಿ ಅವರನ್ನು `ಹ್ಯಾಂಡ್‍ಸಮ್ ಎಂದು ಹೊಗಳಿದ್ದಾರೆ. ಮೋದಿ ಗುಜ ರಾತ್ ಸಿಎಂ ಆಗಿದ್ದಾಗ ಹಲವು ಬಾರಿ ಬೀಜಿಂಗ್‍ಗೆ ಭೇಟಿ ನೀಡಿದ್ದರು. ಪ್ರಧಾನಿಯಾದ ಬಳಿಕ ಮೊದಲ ಬಾರಿ ಚೀನಾಗೆ ಪ್ರವಾಸ ಹಮ್ಮಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್, ನದಿ ಪಾತ್ರದಲ್ಲಿ ಕಟ್ಟೆಚ್ಚರ

ನಿನ್ನ ತಲೆ ಕಡಿತೀವಿ: ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ, ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

‘ಯಾರು ಏನು ಧರಿಸಬೇಕು ಎಂಬುದನ್ನು ಕೋರ್ಟ್‌ ನಿರ್ಧರಿಸಬಾರದು’: ಹಿಜಾಬ್‌ ವಿವಾದದ ಕುರಿತು BJP ನಾಯಕ Syed Zafar Islam ಆಕ್ಷೇಪ

ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ: ರಕ್ಕಸ ಅಲೆಗೆ ವಲಸೆ ಕಚೇರಿಯಲ್ಲಿದ್ದ ಇಶಾ ಫೌಂಡೇಶನ್‌ನ 77 ಮಂದಿ ಕಣ್ಮರೆ; Video ಹಂಚಿಕೊಂಡ ಸದ್ಗುರು! ಹೇಳಿದ್ದೇನು?