ನವದೆಹಲಿ: ಬಾಂಗ್ಲಾ ದೇಶದೊಂದಿಗಿನ ಗಡಿ ಮರುಗುರುತಿಸುವಿಕೆ ಒಪ್ಪಂದದ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ಈ ಮೂಲಕ ಬಾಂಗ್ಲಾ ದೇಶದ ಜತೆಗೆ 41 ವರ್ಷಗಳಿಂದ ಇರುವ ಗಡಿ ವಿವಾದ ಬಗೆಹರ್ಸಲು ಈ ವಿಧೇಯಕ ನೆರವಾಗಲಿದೆ. ಭಾರತ ಬಾಂಗ್ಲಾದೇಶ ಬಾಂಧವ್ಯಕ್ಕೆ ಇದು ಐತಿಹಾಸಿಕ ಮೈಲಿಗಲ್ಲು ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಈ ವಿಧೇಯಕವು ಜಾರಿಯಾಗದ ಬಳಿಕ ಟ್ವೀಟ್ ಮಾಡಿದ್ದಾರೆ. ಜತೆಗೆ ಪ್ರತಿಪಕ್ಷಗಳು ಅವಿರೋಧವಾಗಿ ಒಪ್ಪಿಗೆ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಅದರಲ್ಲೂ ಸೋನಿಯಾ ಗಾಂಧಿ ಅವರಿಗೆ ವಿಶೇಷ ಥ್ಯಾಂಕ್ಸ್ ಹೇಳಿದ್ದಾರೆ. ಈ ವಿಧೇಯಕವು ಬುಧವಾರದಂದು ರಾಜ್ಯಸಭೆಯಲ್ಲಿ ಮಂಡನೆಯಾಗಿ ಒಪ್ಪಿಗೆ ಪಡೆದಿತ್ತು.
ಮೋದಿ ಧನ್ಯವಾದ: ಭೂಗಡಿ ಒಪ್ಪಂದ ವಿಧೇಯಕಕ್ಕೆ ಒಪ್ಪಿಗೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಜತೆಗೆ ಉತ್ತಮ ಸಹಕಾರ ನೀಡಿದ್ದಕ್ಕೆ ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರ, ಮತ್ತು ಪಶ್ಟಿಮ ಬಂಗಾಳ ರಾಜ್ಯಗಳಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ವಿಧೇಯಕದಿಂದ ಭಾರತ ಬಾಂಗ್ಲಾ ಗಡಿಯಲ್ಲಿ ಶಾಂತಿಯುತ ಸ್ಥಿತಿ, ಗಡಿ ಮರು ವಿಂಗಡನೆ, ನಿರ್ವಹಣೆ, ಸಮನ್ವಯ ಹಾಗೂ ಭದ್ರತೆ ಹೆಚ್ಚಿಸಲು ನೆರವಾಗಲಿದೆ.