ನವದೆಹಲಿ: ಖಾಸಗಿ ಚಾನೆಲ್ ಗಳ ಎದುರು ದೂರದರ್ಶನದ ವಾರ್ತಾವಾಹಿನಿ ಡಿಡಿ ನ್ಯೂಸ್ ತಾನೇನೂ ಕಡಿಮೆ ಇಲ್ಲ ಎಂದು ಸಾಬೀತು ಪಡಿಸಲು ಮುಂದಾಗಿದೆ.
ಸರ್ಕಾರಿ ಸ್ವಾಮ್ಯದ ಡಿಡಿ ನ್ಯೂಸ್ ಇದೀಗ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಈ ಉಚಿತ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ಫೋನ್‍ಗಳಲ್ಲಿ ಲೈವ್ ಟಿವಿ, ನ್ಯೂಸ್ ಫೀಡ್ ಹಾಗೂ ವಿಡಿಯೋಗಳನ್ನು ನೋಡಬಹುದು.
ಈ ಆ್ಯಪ್, ದುರ್ಬಲ ನೆಟ್‍ವರ್ಕ್ ಇದ್ದರೂ ಕಾರ್ಯನಿರ್ವಹಿಸುತ್ತದೆ. ಹೊಸ ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಇದು ಪ್ರಸಾರ ಭಾರತಿ ಇತಿಹಾಸದಲ್ಲಿ ಮೈಲುಗಲ್ಲು ಎಂದರು.