ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಿಂಗಾಪುರ ಪ್ರವಾಸದ ಒಟ್ಟು ವೆಚ್ಚದ ಬಗ್ಗೆ ಮಾಹಿತಿಯನ್ನು ನೀಡಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿದೆ. ಅದು ತುಂಬಾ `ಅನಿಶ್ಚಿತ' ಹಾಗೂ ವಿಸ್ತಾರ ವಾದುದು ಎಂದು ಅದು ತಿಳಿಸಿದೆ. ಅಹಮದಾಬಾದ್ ಮೂಲದ ವ್ಯಕ್ತಿಯೊಬ್ಬರು ಆರ್ ಟಿಐ ಅನ್ವಯ ಮೋದಿ ಅವರು ಲೀ ಯಾನ್ ಕೌನ್ ಅವರ ಅಂತ್ಯಸಂಸ್ಕಾರದ ಸಮಯ ದಲ್ಲಿ ಸಿಂಗಾಪುರಕ್ಕೆ ತೆರಳಿರುವ ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಏ.3ರಂದು ಅರ್ಜಿ ಸಲ್ಲಿಸಿದ್ದರು. ವೆಚ್ಚದ ವಿವರವು ತುಂಬಾ ಅಸ್ಪಷ್ಟ ಹಾಗೂ ವಿಶಾಲವಾಗಿರುವುದರಿಂದ ಈ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದು ಪ್ರಧಾನಿ ಕಚೇರಿಯು ತಿಳಿಸಿದೆ.