ಸಾಂದರ್ಭಿಕ ಚಿತ್ರ 
ದೇಶ

ಗ್ರೆನೇಡ್ ದಾಳಿ; 14 ಮಂದಿಗೆ ಗಾಯ

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಾರ್ಕೆಟ್‍ವೊಂದರಲ್ಲಿ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಗೆ ಇಬ್ಬರು ಅಪ್ರಾಪ್ತೆಯರು...

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಾರ್ಕೆಟ್‍ವೊಂದರಲ್ಲಿ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಗೆ ಇಬ್ಬರು ಅಪ್ರಾಪ್ತೆಯರು ಸೇರಿ ಒಟ್ಟು 14 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಗ್ರೆನೇಡ್ ಗುರಿ ತಪ್ಪಿ ಜನ ದಟ್ಟಣೆಯಿದ್ದ ಸ್ಥಳದಲ್ಲಿ ಸಿಡಿದು ಈ ಅನಾಹುತ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆ ಬಳಿಯ ಗಡಿ ಪ್ರದೇಶದಲ್ಲಿ ಭದ್ರತಾ ಪಡೆ, ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿದ್ದು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಉಗ್ರರ ಅಡಗುತಾಣದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಹಾಗೂ ಕಾಕೋರ ಅರಣ್ಯ ಪೊಲೀಸರು ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದರು.

ಅಡಗುತಾಣದಿಂದ ಒಂದು ಎಕೆ-47, 212 ಎಕೆ ರೌಂಡ್ಸ್, 8 ಎಕೆ ದ್ದುಗುಂಡುಗಳು, 223 ಪಿಕ ರೌಂಡ್ಸ್, ಒಂದು ಜಿಪಿಎಸ್, 3 ಬೈನಾಕ್ಯೂಲರ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ