ತೇಜಸ್ 
ದೇಶ

ನಮ್ಮ ಸೇನೆಗೆ ಸುದೀರ್ಘ ಯುದ್ಧ ಎದುರಿಸುವ ಸಾಮರ್ಥ್ಯವೇ ಇಲ್ಲ

ನೆರೆಹೊರೆಯಲ್ಲಿ ಪಾಕಿಸ್ತಾನ, ಚೀನಾದಂಥ ವೈರಿಗಳನ್ನು ಇಟ್ಟುಕೊಂಡಿದ್ದರೂ ಭಾರತೀಯ ಸೇನೆಗೆ ಸುದೀರ್ಘ ಯುದಟಛಿವನ್ನು ಎದುರಿಸುವಷ್ಟು ಸಾಮರ್ಥ್ಯವೇ...

ನವದೆಹಲಿ: ನೆರೆಹೊರೆಯಲ್ಲಿ ಪಾಕಿಸ್ತಾನ, ಚೀನಾದಂಥ ವೈರಿಗಳನ್ನು ಇಟ್ಟುಕೊಂಡಿದ್ದರೂ ಭಾರತೀಯ ಸೇನೆಗೆ ಸುದೀರ್ಘ ಯುದಟಛಿವನ್ನು ಎದುರಿಸುವಷ್ಟು ಸಾಮರ್ಥ್ಯವೇ
ಇಲ್ಲ. ನಮ್ಮ ಸೇನೆ ಯುದ್ಧ ಸನ್ನದ್ಧ  ಸ್ಥಿತಿಯಲ್ಲೇ ಇಲ್ಲ ಎನ್ನುವ ಆಘಾತಕಾರಿ ವಿಚಾರವನ್ನು ಮಹಾಲೇಖಪಾಲ(ಸಿಎಜಿ) ವರದಿ ಬಹಿರಂಗಪಡಿಸಿದೆ. ಅ„ಕಾರಿಗಳ, ಅತ್ಯಾಧುನಿಕ ಆಯುಧಗಳ ಕೊರತೆ ಎದುರಿಸುತ್ತಿರುವ ಭಾರತೀಯ ಸೇನೆ ಬಳಿ ಸುದೀರ್ಘ ಯುದ್ಧ ಎದುರಿಸುವಷ್ಟು ಯುದ್ಧ  ಸಾಮಗ್ರಿಗಳೇ ಇಲ್ಲ. ಸದ್ಯ ಸೇನೆ ಬಳಿ ಇರುವ  ಶಸ್ತ್ರಾಸ್ತ್ರಗಳು ಸಾಕಾಗಬಹುದು ಎಂದು ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ಹೇಳಲಾಗಿದೆ. ನಿಯಮಾವಳಿ ಪ್ರಕಾರ ಸೇನೆಯ ಬಳಿ ಕನಿಷ್ಠ 40 ದಿನದ ಯುದಟಛಿಕ್ಕಾಗುವಷ್ಟು ಶಸ್ತ್ರಾಸ್ತ್ರಗಳ ಸಂಗ್ರಹ ಇರಬೇಕು.

 ತೇಜಸ್ ವಿಮಾನ ಯೋಜನೆಗೂ ಟೀಕೆ
ಮೂರು ದಶಕದಿಂದ ಆಮೆನಡಿಗೆಯಲ್ಲಿ ಸಾಗುತ್ತಿರುವ ಭಾರತದ ಮಹತ್ವಾಕಾಂಕ್ಷೆಯ ಹಗುರ ಯುದ್ಧ ವಿಮಾನ ಯೋಜನೆ (ತೇಜಸ್) ಈಗ ಮಹಾಲೇಖಪಾಲ(ಸಿಎಜಿ)
ಅವರಿಂದಲೂ ತೀವ್ರ ಟೀಕೆಗೆ ಗುರಿಯಾಗಿದೆ. ಮೂರುದಶಕಗಳ ಸಂಶೋಧನೆ ಬಳಿಕ ಸಿದಟಛಿವಾಗಿರುವ ತೇಜಸ್‍ನ ಮಾರ್ಕ್-1 ಆವೃತ್ತಿಯಲ್ಲಿ ಅನೇಕ ನ್ಯೂನತೆಗಳಿವೆ.
ಭಾರತೀಯ ವಾಯುಸೇನೆಯ ನಿರೀಕ್ಷೆಯನ್ನು ಪೂರೈಸುವ ಸಾಮರ್ಥ್ಯ ಈ ವಿಮಾನಕ್ಕಿಲ್ಲ ಎಂದು ಸಿಎಜಿ ತಮ್ಮ ವರದಿಯಲ್ಲಿ ದೂರಿದ್ದಾರೆ.
ತರಬೇತಿಗಾಗಿ ಬಳಸುವ ಎಲ್‍ಸಿಎಯ ಮಾದರಿ ಇನ್ನೂ ಸಿದಟಛಿಗೊಂಡಿಲ್ಲ. ವಾಯುಸೇನೆ ಬಯಸುವ ಎಲೆಕ್ಟ್ರಾನಿಕ್ ವಾರ್  ಫೇರ್ ಸೌಲಭ್ಯ ಮಾರ್ಕ್-1ಕ್ಕೆ ಇಲ್ಲ. ಜಾಗದ
ಕೊರತೆಯಿಂದಾಗಿ ಐಎಎಫ್ ಬಯಸಿದ ಸ್ವ ರಕ್ಷಣೆಯ ಜಾಮರ್ ಅಳವಡಿಸುವುದು ಸಾಧ್ಯವಾಗಿಲ್ಲ. ಇದಲ್ಲದೆ, ವಿಮಾನದಲ್ಲಿ ಅಳವಡಿಸಲಾಗಿರುವ ರೇಡಾರ್ ವಾರ್ನಿಂಗ್
ರಿಸೀವರ್/ಕೌಂಟರ್ ಮೆಷರ್ ಡಿಸ್ಪೆನ್ಸಿಂಗ್ ಸಿಸ್ಟಂನ ಕಾರ್ಯಕ್ಷಮತೆ ಕುರಿತೂ ಅನೇಕ ಪ್ರಶ್ನೆಗಳು ಎದ್ದಿವೆ. ಎಲ್‍ಸಿಎ ವಿಮಾನಗಳ ನಿರ್ಮಾಣ ಮತ್ತು ಪೂರೈಕೆಯಲ್ಲಿನ ವಿಳಂಬದಿಂದಾಗಿ ಭಾರತೀಯ ವಾಯುಸೇನೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ದುಬಾರಿ ತಾತ್ಕಾಲಿಕ ವ್ಯವಸ್ಥೆಗೆ ಕೈಹಾಕಬೇಕಾಯಿತು. ಮಿಗ್ ಬಿಐಎಸ್, ಮಿಗ್- 29 ಮತ್ತು ಮಿರಾಜ್ ಯುದ್ದ ವಿಮಾನಗಳನ್ನು ರು. 20, 037
ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಬೇಕಾಯಿತು. ಜತೆಗೆ, ಮಿಗ್-21ರ ನಿವೃತ್ತಿ ವಯಸ್ಸನ್ನು ವಿಸ್ತರಿಸಬೇಕಾಯಿತು ಎಂದು ವರದಿ ಹೇಳಿದೆ. ಮಾರ್ಕ್-1ರ ನ್ಯೂನತೆಗಳನ್ನುಮಾರ್ಕ್-2ರಲ್ಲಿ ಸರಿಪಡಿಸಲಾಗುವುದು ಎಂದು ಡಿಆರ್‍ಡಿಒ ಹೇಳಿದೆ


ಅಂಕಿ- ಅಂಶಗಳು

ರು. 3,578 ಕೋಟಿ ಮೌಲ್ಯದ ಯುದ್ಧಸಾಮಗ್ರಿಗಳು ಮುರಿದ ಸ್ಥಿತಿಯಲ್ಲಿವೆ.
 ರು. 2,109 ಕೋಟಿ ಮೌಲ್ಯದ ಯುದ್ಧ ಸಾಮಗ್ರಿಗಳು ದುರಸ್ತಿ ಸ್ಥಿತಿಯಲ್ಲಿವೆ.
ರು. 814 ಕೋಟಿ ಯುದ್ಧ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದಾಗಿ ಬಳಕೆಗೆ ಯೋಗ್ಯವಾಗಿಲ್ಲ.
ರು. 1618 ಕೋಟಿ ಮೌಲ್ಯದ ದೋಷಪೂರಿತ ಯುದ್ಧ ಸಾಮಗ್ರಿಗಳನ್ನು ಸೇನೆಯೇ ತಿರಸ್ಕರಿಸಿದೆ.

ಯಾಕೆ ಯೋಜನೆ ಆರಂಭ?
ಮಿಗ್-21 ಯುದ್ಧ ವಿಮಾನಕ್ಕೆ ಪರ್ಯಾಯವಾಗಿ ತೇಜ ಕಳೆದರೂ ವಾಯುಸೇನೆಯ ಶಕ್ತಿತುಂಬಲು ತೇಜಸ್‍ಗೆ ಸಾಧ್ಯವಾಗಿಲ್ಲ.
ತೇಜಸ್‍ನ 53 ಅಂಶಗಳ ಕುರಿತು ವಾಯುಸೇನೆ ಆಕ್ಷೇಪ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT