ದಾವೂದ್ ಇಬ್ರಾಹಿಂ, ರಾಜನಾಥ್ ಸಿಂಗ್ 
ದೇಶ

ಭೂಗತ ಪಾತಕಿ ದಾವೂದ್ ನನ್ನು ಭಾರತಕ್ಕೆ ಕರೆತರುತ್ತೇವೆ: ರಾಜನಾಥ್ ಸಿಂಗ್

ಭೂಗತ ಪಾತಕಿ 26/11 ಮಂಬೈ ಸ್ಫೋಟದ ರೂವಾರಿ ಉಗ್ರ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಕರೆ ತರಲು ಎಲ್ಲಾ ರೀತಿಯ.......

ನವದೆಹಲಿ: ಭೂಗತ ಪಾತಕಿ 26/11 ಮಂಬೈ ಸ್ಫೋಟದ ರೂವಾರಿ ಉಗ್ರ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಕರೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು ದಾವೂದ್ ಪಾಕಿಸ್ತಾನದಲ್ಲಿರುವ ಖಚಿತ ಮಾಹಿತಿ ಭಾರತಕ್ಕೆ ಲಭಿಸಿದೆ ಎಂದರು.
ಪಾತಕಿ ದಾವೂದ್ ನನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ಪಾಕಿಸ್ತಾನದ ಮೇಲೆ ಒತ್ತಡ ಹಾಕುತ್ತಿರುವುದಾಗಿ ಹೇಳಿದ ರಾಜನಾಥ್ ಸಿಂಗ್ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೇವೆ. ಆದರೆ ಪಾಕಿಸ್ತಾನ ಏಜೆನ್ಸಿಗಳು ಭಾರತದ ಅಧಿಕಾರಿಗಳೊಂದಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದರು.
 ಆದರೆ ಯಾವ ಜಾಗದಲ್ಲಿದ್ದಾನೆ ಎಂಬ ನಿಖರ ಮಾಹಿತಿ ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದರು. ದಾವೂದ್ ಇಬ್ರಾಹಿಂ ನನ್ನು ತಮ್ಮ ವಶಕ್ಕೆ ನೀಡಬೇಕೆಂದು ಪಾಕಿಸ್ತಾನ ಸರ್ಕಾರಕ್ಕೆ ಕೋರಿರುವುದಾಗಿ ತಿಳಿಸಿದ್ರು.
ದಾವೂದ್ ಕರಾಚಿಯಿಂದ ದುಬೈಗೆ ಹೋಗಿರುವ ಮಾಹಿತಿ ಇತ್ತು. ಆದರೆ ಆತನ ವಿರುದ್ಧ ರೆಡ್ ಕಾರ್ಪೆಟ್ ನೋಟಿಸ್ ಜಾರಿ ಮಾಡಿದ  ಮೇಲೆ ಆತ ದಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ. ದಾವೂದ್ ನನ್ನು ಭಾರತದ ವಶಕ್ಕೆ ನೀಡುವುದು ಪಾಕಿಸ್ತಾನಕ್ಕೆ ಒಪ್ಪಿಗೆಯಿಲ್ಲ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್