ವಿಚಿತ್ರ ಖಾಯಿಲೆಯಿಂದ ನರಳುತ್ತಿರುವ ಪ್ಲಾಸ್ಟಿಕ್ ಮಗು 
ದೇಶ

ಅಮೃತಸರದಲ್ಲಿ ಪ್ಲಾಸ್ಟಿಕ್ ಬೇಬಿ ಜನನ!

ಸ್ಪರ್ಶ ಜ್ಞಾನವೊಂದಿಲ್ಲದಿದ್ದರೆ ಈ ಮಗುವಿಗೆ ಯಾರೂ ಜೀವ ಇದೆ ಎಂದರೆ ನಂಬಲಿಕ್ಕಿಲ್ಲ. ಕೆಪ್ಪು ಕಣ್ಣು, ಮೀನನ್ನು ನೆನಪಿಸುವ ಮುಖ, ಪ್ಲಾಸ್ಟಿಕ್ ಮೇಲ್ಮೆನ ಚರ್ಮ...

ಚಂಡೀಗಡ: ಸ್ಪರ್ಶ ಜ್ಞಾನವೊಂದಿಲ್ಲದಿದ್ದರೆ ಈ ಮಗುವಿಗೆ ಯಾರೂ ಜೀವ ಇದೆ ಎಂದರೆ ನಂಬಲಿಕ್ಕಿಲ್ಲ. ಕೆಪ್ಪು ಕಣ್ಣು, ಮೀನನ್ನು ನೆನಪಿಸುವ ಮುಖ, ಪ್ಲಾಸ್ಟಿಕ್ ಮೇಲ್ಮೆನ ಚರ್ಮ... ಒಂದು ರೀತಿಯಲ್ಲಿ ರಸ್ತೆ ಬದಿಯಲ್ಲಿ ಮಾರಾಟಕ್ಕಿಡುವ ಪ್ಲಾಸ್ಟಿಕ್ ಡಾಲ್‍ನಂತಿದೆ ಈ ಮಗು!

ಹೌದು, ವೈದ್ಯ ಲೋಕದ ಪಾಲಿಗಿದು ಪ್ಲಾಸ್ಟಿಕ್ ಮಗು. ಅಮೃತಸರದ ರಾಜಸಾನಿಯ ಮಹಿಳೆಯೊಬ್ಬರು ಇಂಥ ವಿಚಿತ್ರ ಶಿಶುವಿಗೆ ಜನ್ಮ ನೀಡಿದ್ದಾರೆ. ಪಂಜಾಬ್‍ನ ಅಮೃತಸರ ಜಿಲ್ಲೆಯ ಗುರುನಾನಕ್ ದೇವ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಹೆಣ್ಣು ಮಗು ಜನಿಸಿದೆ. ವೈದ್ಯರ ಪ್ರಕಾರ ಈ ರೀತಿಯ ಮಕ್ಕಳು ಹುಟ್ಟುವುದು ವಿರಳ. 6 ಲಕ್ಷ ನವಜಾತ ಶಿಶುಗಳಲ್ಲಿ ಒಂದು ಮಗು ಇಂಥ ಲಕ್ಷಣ ಹೊಂದಿರುತ್ತದಂತೆ. ಇಂಥ ಮಗುವಿಗೆ ವೈಜ್ಞಾನಿಕವಾಗಿ `ಕೊಲೊಡಿಯನ್' ಎನ್ನುತ್ತಾರೆ. ಅಮೃತಸರದಲ್ಲಿ ಹುಟ್ಟಿದ ಎರಡನೇ ಮಗು ಇದು. 2014ರಲ್ಲೂ ಇಂಥದ್ದೇ ಪ್ಲಾಸ್ಟಿಕ್ ಶಿಶುವಿನ ಜನನವಾಗಿತ್ತು. ಆದರೆ, ಮಗು 3 ದಿನದಲ್ಲೇ ಅಸುನೀಗಿತ್ತು.

ವಿಚಿತ್ರ ರೂಪ
ದೂರದಿಂದ ನೋಡಿದರೆ ಈ ಮಗು ರಬ್ಬರ್ ಗೊಂಬೆಯನ್ನು ಹೋಲುತ್ತದೆ. ಮಗುವಿನ ಚರ್ಮ ಹಾವನ್ನು ಹೋಲುತ್ತದೆ. ಮುಖ ಮೀನನ್ನು ನೆನಪಿಸುತ್ತದೆ. ಕಣ್ಣು ಹಾಗೂ ತುಟಿಗಳು ಗಾಢ ಕೆಂಬಣ್ಣದಿಂದ ಕೂಡಿದೆ. ಈ ವಿಚಿತ್ರ ಮಗುವಿಗೆ ತಾಯಿ ಎದೆಹಾಲು ಕುಡಿಯಲೂ ಅಸಾಧ್ಯ ಎನ್ನುವ ಸ್ಥಿತಿ ಇದೆ ಎಂದು ಮೇಲ್ ಟುಡೇ ವರದಿ ಮಾಡಿದೆ. ಸ್ವಲ್ಪ ಮುಟ್ಟಿದರೂ ಸಾಕು, ಮಗು ಜೋರಾಗಿ ಅಳುತ್ತದೆ. ಸಾಮಾನ್ಯವಾಗಿ ಈ ರೀತಿಯ ಮಗು ಹುಟ್ಟಿದ 15-30 ದಿನಗಳೊಳಗೆ ಹಾವಿನಂತೆ ಚರ್ಮ ಕಳಚಿಕೊಳ್ಳಲಾರಂಭಿಸುತ್ತದೆ. ಇದರಿಂದ ಸೋಂಕು ಉಂಟಾಗಿ ಚರ್ಮದಲ್ಲಿ ಬಿರುಕಾಗುವ ಸಾಧ್ಯತೆಗಳಿವೆ. ಅಲ್ಲದೇ, ಪ್ಲಾಸ್ಟಿಕ್ ಮೇಲ್ಮೈಯಿಂದ ಮಗುವಿನ ಪರಿಸ್ಥಿತಿ ಶೋಚನೀಯವಾಗಿ ಬಿಡುತ್ತದೆ.

ಈ ರೀತಿಯ ಮಗು ಹುಟ್ಟುವುದು ವಿರಳ. ಈ ಶಿಶುಗಳು ಮೇಣದ ರೀತಿಯ ಹಾಗೂ ಹೊಳಪಿರುವ ಚರ್ಮ ಹೊಂದಿರುತ್ತವೆ. ಪ್ಲಾಸ್ಟಿಕ್ ಮಗು ಹೈಪೋಥರ್ಮಿಯಾ(ಲಘುಉಷ್ಣತೆ ಅಂದರೆ ದೇಹದ ಉಷ್ಣತೆ ಸಾಮಾನ್ಯಕ್ಕಿಂತ ಕಡಿಮೆಯಿರುವುದು), ಡಿಹೈಡ್ರೇಷನ್(ನಿರ್ಜಲೀಕರಣ)ದಂತಹ ಸಮಸ್ಯೆಗಳಿಂದ ನರಳುತ್ತದೆ. ದಶಕದ ಹಿಂದೆ ಇಂಥ ಮಗುವೊಂದಕ್ಕೆ ನಾನು ಚಿಕಿತ್ಸೆ ನೀಡಿದ್ದೆ. 2-3 ವಾರಗಳಿಗೊಮ್ಮೆ ಮಗುವಿನ ಚರ್ಮ ಕಳಚಿಕೊಳ್ಳುತ್ತದೆ. ಈ ಸಮಯದಲ್ಲಿ ಅದು ಬಹಳ ನೋವನುಭವಿಸುತ್ತದೆ. ಅಲ್ಲದೆ, ಕಣ್ಣಿನ ರೆಪ್ಪೆಯನ್ನು ಮುಚ್ಚುವುದೂ ಅಸಾಧ್ಯವಾಗಿ ಬಿಡುತ್ತದೆ.
-ಡಾ. ಆರ್.ಎಸ್. ಬೇಡಿ, ಮಕ್ಕಳ ತಜ್ಞ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!