ವಾಷಿಂಗ್ಟನ್: ಮತ್ತೆ ರಾಷ್ಟ್ರೀಯ ಭೌಗೋಳಿಕ ಬೀ ಸ್ಪರ್ಧೆಯ ಮುಕುಟವನ್ನು ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ತನ್ನ ಮುಡಿಗೇರಿಸಿಕೊಂಡಿದ್ದಾನೆ.
ಅಮೆರಿಕಾದಲ್ಲಿ ನಡೆಯುವ ಈ ಪ್ರತಿಷ್ಠಿತ ಸ್ಪರ್ಧೆಯ ಅಂತಿಮ ಮೂರು ಸ್ಥಾನಗಳನ್ನು ಕೂಡ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿಗಳೇ ಪಡೆದು ದೇಶಕ್ಕೆ ಮತ್ತಷ್ಟು ಕೀರ್ತಿಯನ್ನು ತಂದುಕೊಟ್ಟಿದ್ದಾರೆ. 14 ವರ್ಷದ ಕರಣ್ ಮೆನನ್ ಪ್ರಥಮ ಸ್ಥಾನ ಗಳಿಸಿ ರು. 5,442,960 ಸ್ಕಾಲರ್‍ಶಿಪ್ ಅನ್ನು ಪಡೆದಿದ್ದಾನೆ.
ಭೌಗೋಳಿಕ ಬೀ ಸ್ಪರ್ಧೆಯ ಅಂತಿಮ 10 ಸ್ಪರ್ಧಿಗಳಲ್ಲೂ 7 ಮಂದಿ ಭಾರತೀಯರೇ ಇದ್ದರು. 11 ವರ್ಷದ ಶ್ರೀಯ ಯರ್ಲಗಡ್ಡ ದ್ವಿತೀಯ ಸ್ಥಾನ ಹಾಗೂ ರು. 1,600,870 ನಗದು ಪಡೆದಿದ್ದಾಳೆ. ಅರ್ಕಾನ್ಸಾಸ್‍ನ ಸೋಜಸ್ ವಾಗ್ಳೆ ಮೂರನೇ ಸ್ಥಾನವನ್ನು ಗಳಿಸಿದ್ದು ರು. 640,348 ನಗದು ಬಹುಮಾನವನ್ನು ಗಳಿಸಿದ್ದಾನೆ. ಅಲ್ಲದೇ, ಈ ಸ್ಪರ್ಧೆಯನ್ನು ಹಲವಾರು ವರ್ಷಗಳಿಂದ ಭಾರತೀಯ ಮೂಲದ ವಿದ್ಯಾರ್ಥಿಗಳು ಗೆದ್ದು ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ.