ದೇಶ

ಆಟೋ ರಿಕ್ಷಾ ಚಾಲಕರೊಂದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಸಭೆ

Shilpa D

ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅರವಿಂದ್ ಕೇಜ್ರಿವಾಲ್ ಮೊದಲ ಬಾರಿಗೆ ಆಟೋ ರಿಕ್ಷಾ ಚಾಲಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬುರಾರಿಯಲ್ಲಿ ನಡೆಯೋ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವ ಕೇಜ್ರಿವಾಲ್ ಆಟೋ ಚಾಲಕರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಲಿದ್ದಾರೆ.
ದೆಹಲಿಯಲ್ಲಿ ಆಟೋ ಚಾಲಕರಿಗೆ ಇರುವ ಸಮಸ್ಯೆ, ಬೇಡಿಕೆ, ದರ ಏರಿಕೆ, ಜಿಪಿಎಸ್ ನಿರ್ವಹಣೆ, ಟ್ರಾಫಿಕ್ ಪೊಲೀಸರ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಸಣ್ಣ ಪುಟ್ಟ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಟ್ರಾಫಿಕ್ ಪೊಲೀಸರ ಅಧಿಕಾರವನ್ನು ಮೊಟಕುಗೊಳಿಸಲು ಚಿಂತನೆ ನಡೆಸುತ್ತಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಯಂ ದೂರು ದಾಖಲಿಸಲು ಸಹಾಯವಾಣಿ ಕೇಂದ್ರವನ್ನು ಪುನಶ್ಚೇತನಗೊಳಿಸಲು ಸರ್ಕಾರ ಯೋಜಿಸಿದೆ.
ಜೊತಗೆ ಸುಲಭವಾಗಿ ಆಟೋ ಚಾಲಕರ ಪರವಾನಗಿ ನವೀಕರಣಕ್ಕಾಗಿ ಹೊಸ ನಿಯಮ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸುತ್ತಿದೆ.

SCROLL FOR NEXT