ಸಾಂದರ್ಭಿಕ ಚಿತ್ರ 
ದೇಶ

ಮಹಡಿಯಿಂದ ಬಿದ್ದು ಬಿಹಾರ ಮಾಜಿ ಶಾಸಕ ಮಗನ್ ಇನ್ಸಾನ್ ಸಾವು

ಮನೆಯ ಮಹಡಿ ಮೇಲೆ ವಾಯುವಿಹಾರ ಮಾಡುತ್ತಿದ್ದ ಬಿಹಾರ ಮಾಜಿ ಶಾಸಕ ಮಗನ್ ಇನ್ಸಾನ್ (84), ಮಹಡಿಯಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಬಿಹಾರದ ಕತಿಹರ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ...

ಕತಿಹರ್: ಮನೆಯ ಮಹಡಿ ಮೇಲೆ ವಾಯುವಿಹಾರ ಮಾಡುತ್ತಿದ್ದ ಬಿಹಾರ ಮಾಜಿ ಶಾಸಕ ಮಗನ್ ಇನ್ಸಾನ್ (84), ಮಹಡಿಯಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಬಿಹಾರದ ಕತಿಹರ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಮಗನ್ ಇನ್ಸಾನ್ ಅವರು ಪತ್ನಿ, 3 ಗಂಡು ಮಕ್ಕಳು, 4 ಹೆಣ್ಣುಮಕ್ಕಳನ್ನು ಅಗಲಿ ಇಹ ಲೋಕ ತ್ಯಜಿಸಿದ್ದಾರೆ.

ಇಂದು ಬೆಳಿಗ್ಗೆ ಮಹಡಿ ಮೇಲೆ ವಾಯುವಿಹಾರ ಮಾಡಿ ನಂತರ ಮೆಟ್ಟಿಲು ಇಳಿದು ಮನಯ ಒಳಗೆ ಬರುತ್ತಿದ್ದರು. ಈ ವೇಳೆ ಕಾಲು ಎಡವಿ ಜಾರಿಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಲಾಗಿತ್ತಾದರೂ, ಬೀಳುವ ಭಯದಲ್ಲಿ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು ಎಂದು ಮದನ್ ಇನ್ಸಾನ್ ಅವರ ಮಗ ದಿನೇಶ್ ಇನ್ಸಾನ್ ಹೇಳಿದ್ದಾರೆ.

ಇದೇ ವೇಳೆ ಅಂತಿಮ ಸಂಸ್ಕಾರ ಕುರಿತಂತೆ ಮಾತನಾಡಿರುವ ಅವರು, ಇಂದು ಸಂಜೆ ಅಂತಿಮ ಸಂಸ್ಕಾರದ ವಿಧಿವಿಧಾನವನ್ನು ನಡೆಸಲಾಗುತ್ತಿದ್ದು, ಅಂತಿಮ ಸಂಸ್ಕಾರವನ್ನು ತಂದೆ ಆಸೆಯಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ,

1980ರಲ್ಲಿ ಕಡ್ವಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಗೆಲುವು ಸಾಧಿಸಿದ್ದ ಮದನ್ ಇನ್ಸಾನ್ ಅವರು, 1985 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯುವ ಮೂಲಕ ಪ್ರನ್ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ