ದೇಶ

ಭಾರತದಲ್ಲಿ ಶೇ.73 ರಷ್ಟು ಖಾಸಗಿ ವಾಹನಗಳಿಗೆ ವಿಮೆಯೇ ಇಲ್ಲ!

Srinivas Rao BV

ನವದೆಹಲಿ: ಭಾರತದಲ್ಲಿ ಶೇ.73 ರಷ್ಟು  ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರವಾಹನಗಳು ವಿಮೆಯನ್ನು ಹೊಂದಿಲ್ಲ ಎಂದು  ಸುಪ್ರೀಂ ಕೋರ್ಟ್ ನ ನ್ಯಾ.ಕೆ.ಎಸ್ ರಾಧಾಕೃಷ್ಣನ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ಕಾನೂನನ್ನು ರಚಿಸುವ ಹಿನ್ನೆಲೆಯಲ್ಲಿ ನ್ಯಾ.ಕೆ.ಎಸ್ ರಾಧಾಕೃಷ್ಣನ್ ಸಮಿತಿಯನ್ನು ರಚಿಸಲಾಗಿತ್ತು. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆದಿರುವ ಸಮಿತಿಗೆ, ದೇಶಾದ್ಯಂತ ಒಟ್ಟು ಶೇ.82 ರಷ್ಟು ಖಾಸಗಿ ವಾಹನಗಳಿದ್ದು ಈ ಪೈಕಿ ಶೇ.72 -73 ರಷ್ಟು ವಾಹನಗಳು ವಿಮೆ ಹೊಂದಿಲ್ಲ ಎಂದು ತಿಳಿದುಬಂದಿದೆ. ಶೇ.10 -12 ರಷ್ಟು ಕಾರುಗಳೂ ವಿಮೆ ರಹಿತವಾಗಿ ಸಂಚರಿಸುತ್ತಿವೆ. ವಾಹನ ಸಂಚಾರರು  ವಿಮೆ ಅವಧಿ ಮುಕ್ತಾಯಗೊಂಡರೂ ಅದನ್ನು ನವೀಕರಿಸದ ಪರಿಣಾಮ ದೇಶಾದ್ಯಂತ ಬಹುತೇಕ ವಾಹನ ಸವಾರರ ವಾಹನಗಳು ವಿಮೆ ಹೊಂದಿಲ್ಲ. ಇದೇ ವೇಳೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ನ್ಯಾ.ನೇತೃತ್ವದ ಸಮಿತಿ 13  ಹೊಸ  ಶಿಫಾರಸು ಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು ಚಂಡೀ ಘಡ ರಸ್ತೆ ಸುರಕ್ಷತೆಗೆ ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟಿದೆ.

ವಾಹನಗಳ ಸಂಖ್ಯೆಗೂ ಪೊಲೀಸ್ ಪೇದೆಗಳ ಸಂಖ್ಯೆಗೂ ತುಂಬಾ ವ್ಯತ್ಯಾಸ ಕಂಡುಬರುತ್ತಿದ್ದು, ಬೇಡಿಕೆಗೆ ತಕ್ಕಂತೆ ಟ್ರಾಫಿಕ್ ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. ಹಿಟ್ ಅಂಡ್ ರನ್ ಪ್ರಕರಣಗಳ ಬಗ್ಗೆ  ರಾಜ್ಯ ಸರ್ಕಾರ ನಿಗಾ ವಹಿಸಬೇಕು ಸಾಧ್ಯವಾಗಿಲ್ಲ ಎಂದಾದರೆ ಅದು ರಾಜ್ಯ ಸರ್ಕಾರದ ವೈಫಲ್ಯ ಎಂದು  ನ್ಯಾ.ಕೆ.ಎಸ್ ರಾಧಾಕೃಷ್ಣನ್ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ.

SCROLL FOR NEXT