ದೇಶ

ಕಪ್ಪುಹಣ ನಿಯಂತ್ರಿಸಲು ಮತ್ತಷ್ಟು ಕ್ರಮ: ಅರುಣ್ ಜೇಟ್ಲಿ

ನವದೆಹಲಿ: ಕಪ್ಪುಹಣವನ್ನು ನಿಯಂತ್ರಿಸಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಸುಳಿವನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ನೀಡಿದ್ದಾರೆ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಉನ್ನತ ಅಧಿಕಾರಿಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿರುವ ಅವರು, ಕಪ್ಪುಹಣ ಪತ್ತೆಗಾಗಿ ಜಾರಿಗೆ ತರುವ ಹೊಸ ಕಾಯ್ದೆ ಬಗ್ಗೆ ಪ್ರಾಮಾಣಿಕ ತೆರಿಗೆ ಪಾವತಿದಾರರು ಭಯ ಪಡಬೇಕಿಲ್ಲ. ಈ ಕಾಯ್ದೆ ಜಾರಿಯಿಂದ ಹೊಡೆತ ಬೀಳುವುದು ಲೂಟಿಕೋರಿಗೆ ಮಾತ್ರ  ಎಂದು ಹೇಳಿದ್ದಾರೆ.

ತೆರಿಗೆ ನೆಲೆ ಮತ್ತು ತೆರಿಗೆ ಸಂಗ್ರಹ ಹೆಚ್ಚಾದಲ್ಲಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ತೆರಿಗೆ ದರಗಳಲ್ಲಿ ರಿಯಾಯ್ತಿ ಒದಗಿಸುವ ಸರ್ಕಾರದ ಸಾಮರ್ಥ್ಯ ಹೆಚ್ಚುತ್ತದೆ. ಈ ಕುರಿತಂತೆ ಪರ್ಯಾಯ ಆರ್ಥಿಕತೆಯೊಂದನ್ನು ರೂಪಿಸಬೇಕಿದ್ದು, ಇದನ್ನು ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಮಾಡಬೇಕಿದೆ.

ಇದೇ ವೇಳೆ ವಿದೇಶಗಳಲ್ಲಿ ಹೂಡಿರುವ ಕಪ್ಪುಹಣವನ್ನು ಭಾರತಕ್ಕೆ ತರುವ ಕುರಿತಂತೆ ಮಾತಾನಾಡಿರುವ ಅವರು, ಪ್ರಮಾಣಿಕ ತೆರಿಗೆ ಪಾವತಿದಾರರು ಯಾರು ಭಯಪಡಬೇಕಿಲ್ಲ. ಈ ಕಾಯ್ದೆಯ ಗುರಿ ವಿದೇಶಗಳಲ್ಲಿ ಸಂಗ್ರಹವಾಗಿರುವ ಕಪ್ಪುಹಣಕ್ಕೆ ಮಾತ್ರ . ವಿದೇಶದಲ್ಲಿ ಹೂಡಿರುವ ಸಂಪತ್ತಿನ ಮೇಲೆ ವಿಧಿಸಲಾಗುವ ತೆರಿಗೆಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಸಂಪತ್ತು ಹೊಂದಿರುವವರಿಗೆ ಅನುಸರಣಾ ಅವಕಾಶ ಒದಗಿಸುವ ಬಗ್ಗೆ ಇಲಾಖೆಯು ತನ್ನ ನೀತಿಯನ್ನು ರೂಪಿಸಲಿದೆ. ಈ ಹಿಂದೆ ಸರ್ಕಾರ ವ್ಯವಸ್ಥೆಯನ್ನು ತಿರಸ್ಕರಿಸಿದವರು, ಅನುಸರಣಾ ಅವಧಿಯಲ್ಲಿ ಉಲ್ಲಂಘಿಸಿದವರಷ್ಟೇ ಇನ್ನು ಮುಂದೆ ಚಿಂತೆ ನಡೆಸಬೇಕಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT