ದೇಶ

ಸ್ವಿಸ್ ಬ್ಯಾಂಕ್ : 5 ಭಾರತೀಯರ ಹೆಸರು ಬಹಿರಂಗ

Vishwanath S

ನವದೆಹಲಿ: ಅಧಿಕಾರದ ಹೆಸರಲ್ಲಿ ದೇಶವನ್ನು ಲೂಟಿ ಮಾಡಿದವರಿಗೆ ಇನ್ನು ಮುಂದೆ ಕೆಟ್ಟ ದಿನ ಕಾದಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬೆನ್ನಲ್ಲೇ ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣವನ್ನು ಪೇರಿಸಿಟ್ಟ ಭಾರತೀಯರು ಸೇರಿದಂತೆ ವಿದೇಶಿಯರ ಹೆಸರುಗಳನ್ನು ಸ್ವಿಟ್ಜರ್ಲೆಂಡ್ ತನ್ನ ಗೆಜೆಟ್‌ನಲ್ಲಿ ಪ್ರಥಮ ಬಾರಿಗೆ ಬಹಿರಂಗಪಡಿಸಿದೆ.  

ಸ್ವಿಟ್ಜರ್ಲೆಂಡ್ ಬಹಿರಂಗ ಪಡಿಸಿರುವ ಪಟ್ಟಿಯಲ್ಲಿ ಇಬ್ಬರು ಭಾರತೀಯ ಮಹಿಳೆಯರು ಸೇರಿದಂತೆ ಐವರು ಭಾರತೀಯರ ಹೆಸರುಗಳಿವೆ. ಇನ್ನು 30 ದಿನಗಳೊಳಗಾಗಿ ಫೆಡರಲ್ ಅಡ್ಮಿನಿಸ್ಟ್ರೇಟಿವ್ ಕೋರ್ಟ್ ಮುಂದೆ ಮೇಲ್ಮನವಿಯನ್ನು ಸಲ್ಲಿಸದಿದ್ದರೆ ಬ್ಯಾಂಕ್ ಖಾತೆಯ ಎಲ್ಲ ವಿವರಗಳನ್ನು ಭಾರತೀಯ ಅಧಿಕಾರಿಗಳಿಗೆ ನೀಡುವುದಾಗಿ ಎಲ್ಲ ಐವರು ಭಾರತೀಯರಿಗೆ ಸ್ವಿಸ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಎಚ್ಚರಿಕೆ ನೀಡಿದೆ.

ಸದ್ಯ ಐವರ ಹೆಸರು ಮತ್ತು ಜನ್ಮ ದಿನಾಂಕದ ಹೊರತಾಗಿ ಮತ್ತಾವ ಮಾಹಿತಿಯನ್ನು ಸ್ವಿಟ್ಜರ್ಲೆಂಡ್ ಸರಕಾರ ಬಹಿರಂಗಪಡಿಸಿಲ್ಲ. ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಹೊಂದಿರುವವರು ಸ್ನೇಹ ಲತಾ ಸಾಹ್ನಿ ಮತ್ತು ಸಂಗೀತಾ ಸಾಹ್ನಿ. ಉಳಿದವರು ಗುರ್ಜಿತ್ ಸಿಂಗ್ ಕೊಚಾರ್, ಚೌಡ್ ಕೌಸರ್ ಮೊಹಮ್ಮದ್ ಮಸೂದ್, ಸೈಯದ್ ಮೊಹಮ್ಮದ್ ಮಸೂದ್.

ಸ್ನೇಹ ಲತಾ ಸಾಹ್ನಿ (ಜನ್ಮದಿನ : ಅಕ್ಟೋಬರ್ 3, 1942) 2) ಸಂಗೀತಾ ಸಾಹ್ನಿ (ಜನ್ಮದಿನ : ಆಗಸ್ಟ್ 15, 1958) 3) ಗುರ್ಜಿತ್ ಸಿಂಗ್ ಕೊಚಾರ್ (ಜನ್ಮದಿನ : ಜೂನ್ 5, 1980) 4) ಚೌಡ್ ಕೌಸರ್ ಮೊಹಮ್ಮದ್ ಮಸೂದ್ (ಜನ್ಮದಿನ : ಮೇ 5, 1957) 5) ಸೈಯದ್ ಮೊಹಮ್ಮದ್ ಮಸೂದ್ (ಜನ್ಮದಿನ : ಅಕ್ಟೋಬರ್ 24, 1956) ಭಾರತೀಯರು ಮಾತ್ರವಲ್ಲ ಬ್ರಿಟಿಷ್, ಸ್ಪಾನಿಷ್ ಮತ್ತು ರಷ್ಯಾ ದೇಶದ ನಾಗರಿಕರ ಹೆಸರು ಮತ್ತು ಅವರ ಜನ್ಮದಿನಾಂಕವನ್ನು ಬಹಿರಂಗಪಡಿಸಲಾಗಿದೆ.

ಸರ್ಕಾರಕ್ಕೆ ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಹಣ ಇಟ್ಟು ದೇಶದ್ರೋಹ ಮಾಡುತ್ತಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕೆಂದು ಭಾರತ ಸರಕಾರ ಸ್ವಿಸ್ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿತ್ತು. ಸ್ವಿಸ್ ಬ್ಯಾಂಕ್ ಗಳಲ್ಲಿ ವಿದೇಶಿಯರಿಗಿಂತ ಭಾರತೀಯ ತೆರಿಗೆ ವಂಚಕರು ಶೇಖರಿಸಿಟ್ಟ ಹಣದ ಮೊತ್ತವೇ ಹೆಚ್ಚು ಎಂದು ಸಿಬಿಐ ಹೇಳಿದೆ. 500 ಬಿಲಿಟನ್ ಡಾಲರ್ ನಷ್ಟು ಅಕ್ರಮ ಹಣ ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯುತ್ತ ಬಿದ್ದಿದೆ ಎಂದು 2011ರಲ್ಲೇ ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

SCROLL FOR NEXT