ದೇಶ

ಜಪಾನ್ ಸಮುದ್ರದಾಳದಲ್ಲಿ ಭಾರಿ ಭೂಕಂಪನ

Srinivasamurthy VN

ಟೊಕಿಯೋ: ಪೂರ್ವ ಜಪಾನ್ ನ ಸಮುದ್ರದಾಳದಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.8ರ ತೀವ್ರತೆ ದಾಖಲಾಗಿದೆ.

ರಾಜಧಾನಿ ಟೊಕಿಯೋ ನಗರದಿಂದ ಸುಮಾರು 1 ಸಾವಿರ ಕಿ.ಮೀ ದೂರದಲ್ಲಿರುವ ಪೂರ್ವ ಜಪಾನ್ ನ ಒಗಸವರ ದ್ವೀಪಸಮೂಹ ಭೂಕಂಪನದ ಕೇಂದ್ರಬಿಂದುವಾಗಿದ್ದು, ಸಮುದ್ರದಾಳದ ಸುಮಾರು 678 ಕಿ.ಮೀ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಪೂರ್ವ ಜಪಾನ್ ನಾದ್ಯಂತ ಸುನಾಮಿ ಭೀತಿ ಆರಂಭವಾಗಿತ್ತು. ಬಳಿಕ ಪರಿಶೀಲನೆ ನಡೆಸಿದ ಜಪಾನ್ ಹವಾಮಾನ ಇಲಾಖೆಯ ಅಧಿಕಾರಿಗಳು ಸುನಾಮಿ ಭೀತಿಯನ್ನು ಅಲ್ಲಗಳೆದಿದ್ದಾರೆ.

ಇದು ಪ್ರಭಲ ಭೂಕಂಪನವೇ ಆಗಿದ್ದು, ಆದರೆ ಸಮುದ್ರ ಸುಮಾರು 421 ಮೈಲಿಗಳ ಆಳದಲ್ಲಿ ಸಂಭವಿಸಿರುವುದರಿಂದ ಸುನಾಮಿ ಅಲೆಗಳು ಏಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಒಗಸವರ ದ್ವೀಪಸಮೂಹ ಯಾವುದೇ ಜೀವಹಾನಿ ಅಥವಾ ಗಾಯಾಳುಗಳಾದ ಕುರಿತು ವರದಿಯಾಗಿಲ್ಲ.

SCROLL FOR NEXT