ದೇಶ

ತೊಗರಿ ಬೆಲೆ ಕೆಜಿಗೆ ೧೧೦ ರೂ, ಮೊದಲನೇ ದಿನವೇ ಸರದಿಯಲ್ಲಿ ನಿಂತ ಐದು ಲಕ್ಷ ಜನ

Guruprasad Narayana

ಚೆನ್ನೈ: ತಮಿಳುನಾಡು ರಾಜ್ಯ ಸರ್ಕಾರ ತೊಗರಿ ಬೇಳೆಯನ್ನು ಸಹಕಾರಿ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಮಾರುವ ಯೋಜನೆಯ ಪಲಾನುಭವಿಗಳಾಗಳು ಮೊದಲ ದಿನವಾದ ಭಾನುವಾರ ಚೆನ್ನೈ, ತಿರುಚಿ, ಮಧುರೈ ಮತ್ತು ಕೊಯಂಬತ್ತೂರಿನಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸರತಿಯಲ್ಲಿ ನಿಂತಿದ್ದರು. ಮಾರುಕಟ್ಟೆ ದರಕ್ಕಿಂದಲೂ ೧೦೦ ರೂನಷ್ಟು ಕಡಿಮೆ ದರದಲ್ಲಿ ೧೫ ಟನ್ ತೊಗರಿ ಬೇಳೆಯನ್ನು ಸರ್ಕಾರ ನೆನ್ನೆ ಬಿಕರಿ ಮಾಡಿದೆ.

ಸರ್ಕಾರದ ಈ ನಡೆ ಖಾಸಗಿ ಮಾರಾಟಗಾರರಿಗೆ ಬೆಲೆಯನ್ನು ಇಳಿಸಲು ಒತ್ತಡ ಹೇರುತ್ತದೆ ಎಂದೇ ಅಂದಾಜಿಸಲಾಗಿದೆ.

ಒಬ್ಬರಿಗೆ ಒಂದು ಕೆಜಿ ತೊಗರಿ ಬೇಳೆಯಂತೆ ನಿಗದಿ ಪಡಿಸಲಾಗಿತ್ತು. "ತೊಗರಿಬೇಳೆಯ ಮಾರುಕಟ್ಟೆ ದರ ೨೦೦ ರೂ. ನನಗೆ ೯೦ ರೂ ಉಳಿಯಿತು. ಒಂದು ಕೆಜಿ ನಿರ್ಭಂದವನ್ನು ತೆಗೆದರೆ ಇನ್ನೂ ಒಳ್ಳೆಯದು" ಎಂದು ಕೊಡಂಬಕ್ಕಮ್ ನ ಸಹಕಾರಿ ಅಂಗಡಿಯಲ್ಲಿ ತೊಗರಿ ಕೊಂಡ ಭಾಗ್ಯಲಕ್ಷ್ಮಿ ಹೇಳಿದ್ದಾರೆ. ಹೆಚ್ಚು ಜನರಿಗೆ ಸದುಪಯೋಗವಾಗಲೆಂದು ಹಾಗೂ ಹೆಚ್ಚಿನ ಬೆಲೆಗೆ ಮತ್ತೆ ಮಾರುವುದನ್ನು ತಡೆಯಲೆಂದು ಈ ನಿರ್ಬಂಧ ಹೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. "ಇನ್ನೂ ಹೆಚ್ಚಿನ ಜನಕ್ಕೆ ಸಹಕಾರಿಯಾಗಲು ಮುಂದಿನ ೩೦ ದಿನಗಳವರೆಗೆ ೧೫ ಟನ್ ತೊಗರಿ ಬೇಳೆಯನ್ನು ಮಾರಲಿದ್ದೇವೆ" ಎಂದು ತಮಿಳು ನಾಡು ನಾಗರಿಕ ಆಹಾರ ಸರಬರಾಜು ಸಂಘದ ಅಧಿಕಾರಿ ಹೇಳಿದ್ದಾರೆ.

SCROLL FOR NEXT