ಮುಂಬಯಿ: ನವೆಂಬರ್ 8ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ ಸಂಗೀತ ಕಾರ್ಯಕ್ರಮ ಅವರ ವಯಕ್ತಿಕ ಕಾರಣಗಳಿಂದಾಗಿ ರದ್ದಾಗಿದೆ.
ಅಕ್ಟೋಬರ್ 9 ರಂದು ಮುಂಬಯಿಯ ಷಣ್ಮುಗಾನಂದ ಹಾಲ್ ನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಶಿವಸೇನೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಿಂದ ಮುಂಬಯಿ ಕಾರ್ಯ ಕ್ರಮ ರದ್ದು ಪಡಿಸಿ ದೆಹಲಿಯಲ್ಲಿ ಆಯೋಜಿಸಲಾಗಿತ್ತು.
ಡಿಸೆಂಬರ್ 3 ರಂದು ಲಕ್ನೋ ಉತ್ತರ ಪ್ರದೇಶದಲ್ಲಿ ನಡೆಯುವ ಲಕ್ನೋ ಮಹೋತ್ಸವದಲ್ಲಿ ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.