ಅನುಪಮ್ ಖೇರ್ 
ದೇಶ

ಅಸಹಿಷ್ಣುತೆ ಪ್ರತಿಭಟನಾಕಾರರ ವಿರುದ್ಧ ಅನುಪಮ್ ಖೇರ್ ನೇತೃತ್ವದಲ್ಲಿ ಪ್ರತಿಭಟನೆ

ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ  ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ನ.7 ರಂದು ಇಂಡಿಯಾ ಗೆಟ್ ನಿಂದ ಬೆಳಿಗ್ಗೆ 10 ಗಂಟೆಗೆ ಮಾರ್ಚ್ ಫಾರ್ ಇಂಡಿಯಾ ಪ್ರತಿಭಟನೆ ಮೆರವಣಿಗೆ ಪ್ರಾರಂಭವಾಗಲಿದ್ದು ರಾಷ್ಟ್ರಪತಿ  ಭವನದ ವರೆಗೆ ನಡೆಯಲಿದೆ. ಇದರಲ್ಲಿ ಎಲ್ಲಾ ಭಾರತೀಯರು ಭಾಗವಹಿಸಬೇಕೆಂದು ಅನುಪಮ್ ಖೇರ್ ಆಹ್ವಾನಿಸಿದ್ದಾರೆ.  ಅಸಹುಷ್ಣುತೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ನಡೆಸಲಾಗುವ ಪ್ರತಿಭಟನೆ ಬಗ್ಗೆ "ಇಂಡಿಯಾ ಇಸ್ ಟಾಲರೆಂಟ್ ಹ್ಯಾಷ್ ಟ್ಯಾಗ್ ಬಳಸಿ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ. 
ಮಾರ್ಚ್ ಫಾರ್ ಇಂಡಿಯಾ ಪ್ರತಿಭಟನೆಯಲ್ಲಿ ಹಲವು ಸಾಹಿತಿಗಳು, ಬರಹಗಾರರು ಮತ್ತು ಚಿತ್ರಕಾರರು ಭಾಗವಹಿಸಲಿದ್ದಾರೆ.  ದಿಬಾಕರ್ ಬ್ಯಾನರ್ಜಿ ಮತ್ತು ಆನಂದ್ ಪಟವರ್ಧನ್ ಸೇರಿದಂತೆ ಕೆಲವು ಚಿತ್ರ ನಿರ್ದೇಶಕರು, ಬಿಜೆಪಿ ಆಡಳಿತದ ಅವಧಿಯಲ್ಲಿ  ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಅನುಪಮ್ ಖೇರ್ ನೇತೃತ್ವದಲ್ಲಿ ಪರ್ಯಾಯ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನೆಗೆ ಕರೆ ನೀಡುವುದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅನುಪಮ್ ಖೇರ್, ಕೆಲವು ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸುತ್ತಿರುವುದರಿಂದ ಸರ್ಕಾರಕ್ಕೆ ಮುಖಭಂಗವಾಗಿಲ್ಲ. ಬದಲಾಗಿ ಪ್ರಶಸ್ತಿ ನೀಡಿದ್ದ ತೀರ್ಪುಗಾರರಿಗೆ ಮುಖಭಂಗವಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!