ನವದೆಹಲಿ: ನ್ಯಾ.ಟಿ.ಎಸ್. ಠಾಕೂರ್ ಸುಪ್ರೀಂ ಕೋರ್ಟ್‍ನ 43ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಡಿ.2ರಂದು ನಿವೃತ್ತಿಯಾಗಲಿರುವ ಹಾಲಿ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಸ್ಥಾನಕ್ಕೆ ನ್ಯಾ.ಠಾಕೂರ್ ಹೆಸರನ್ನು ಶಿಫಾರಸು ಮಾಡಲಾಗಿದೆ.
ಈ ಬಗ್ಗೆ ನ್ಯಾ.ದತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಿವೃತ್ತರಾಗುವ ಮುನ್ನ ಹಾಲಿ ಮುಖ್ಯ ನ್ಯಾಯಮೂರ್ತಿ ಮುಂದಿನ ಮುಖ್ಯ ನ್ಯಾಯಮೂರ್ತಿಗಳನ್ನು ಹೆಸರಿಸುವುದು ಸುಪ್ರೀಂಕೋರ್ಟ್‍ನ ಔಪಚಾರಿಕ ಸಂಪ್ರದಾಯ.
ಮುಖ್ಯ ನ್ಯಾಯಮೂರ್ತಿಗಳ ಶಿಫಾರಸನ್ನು ಕೇಂದ್ರ ಪರಿಶೀಲಿಸಿದ ನಂತರ ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ರವಾನಿಸುತ್ತದೆ. ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಅಧಿಸೂಚನೆ ಹೊರಡಿಸಲಾಗುತ್ತದೆ.