ದೇಶ

ನಿತೀಶ್‍ಗೆ ಸ್ನೇಹಹಸ್ತ ಚಾಚಿದ ದೇಶದ ಕಾರ್ಪೊರೇಟ್ ವಲಯ

Rashmi Kasaragodu
ನವದೆಹಲಿ : ದೇಶದ ಕಾರ್ಪೊರೇಟ್ ಸಂಸ್ಥೆಗಳು  ಬಿಹಾರದಲ್ಲಿ ನಿತೀಶ್ ಕುಮಾರ್  ಗೆಲುವನ್ನು ಸ್ವಾಗತಿಸಿವೆ. ಹೂಡಿಕೆಯಬಲವರ್ಧನೆ ಹಾಗೂ ಬೃಹತ್ಯೋಜನೆಗಳ ಜಾರಿಗಾಗಿ ಹೊಸ ಸರ್ಕಾರದ ಜತೆ ನಿಕಟವಾಗಿ ದುಡಿ ಯುವುದಾಗಿ ಭರವಸೆ ನೀಡಿವೆ. ಗೆಲುವಿಗಾಗಿ ನಿತೀಶ್‍ರನ್ನು ಉದ್ಯಮ ಮಂಡಳಿ ಅಸೋಚಾಮ್  ಅಬಿsನಂದಿಸಿದ್ದು, ಕೃಷಿ, ಆಹಾರ ಸಂಸ್ಕರಣೆ, ಮೂಲಸೌಲಭ್ಯ, ನಿರ್ಮಾಣ, ಇ-ಆಡಳಿತ, ಪ್ರವಾಸೋ ದ್ಯಮ, ಆರೋಗ್ಯ, ಶಿಕ್ಷಣ, ಕೌಶಲ್ಯವೃದಿಟಛಿ, ಇಂಧನ, ವಿದ್ಯುತ್ ವಲಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಕೇಂದ್ರೀಕರಿಸುವುದಾಗಿ ಹೇಳಿದೆ. ಸಾಮಾನ್ಯ ಜನರಿಗೂ ತಲುಪುವತ್ತ ಆಡಳಿತವನ್ನು ಕೇಂದ್ರೀಕರಿಸಿರುವ ನಿತೀಶ್ ಆಡಳಿತ ಆರ್ಥಿಕತೆಯವೃದ್ಧಿಗೆ ನೆರವಾಗಲಿದೆ ಎಂಬ ಭರವಸೆಯನ್ನು  ಯನ್ನು ಅಸೋಚಾಮ್ ಮಹಾಕಾರ್ಯ ದರ್ಶಿ ಡಿ.ಎಸ್.ರಾವತ್ ವ್ಯಕ್ತಪಡಿಸಿದ್ದಾರೆ. ಸಿಐಐ, ಬಯೋಕಾನ್, ಮಹೀಂದ್ರ, ಬಾಕ್ರ್ಲೆಸ್ ಸಂಸ್ಥೆಗಳೂನಿತೀಶ ರನ್ನು ಅಭಿನಂದಿಸಿವೆ. 
ಮಾರುಕಟ್ಟೆಯತ್ತ ನಿಗಾ: ಎನ್‍ಡಿಎ ಸೋಲಿನಿಂದ ಮಾರುಕಟ್ಟೆಯಲ್ಲಿಉಂಟಾಗಬಹುದಾದ ತಳಮಳಗಳ ನ್ನು ತಹಬಂದಿಗೆ ತರಲು ಮಾರುಕಟ್ಟೆ ನಿಯಂತ್ರಣ ಮಂಡಳಿ ಸೆಬಿ ಹಾಗೂ
ಸ್ಟಾಕ್ ಎಕ್ಸ್‍ಚೇಂಜ್‍ಗಳು ವ್ಯವಸ್ಥೆ ಮಾಡಿಕೊಂಡಿವೆ. ವಹಿವಾಟಿನಲ್ಲಿ ವಂಚನೆ ಅಥವಾ ಆಪತ್ಕಾಲದ ನಿರ್ವಹಣೆಗೆ ವ್ಯವಸ್ಥೆ ಮಾಡಿಕೊಂಡಿ ರುವುದಾಗಿ ಸೆಬಿ ಹೇಳಿದೆ. ಸೋಮ ವಾರ ಆರಂಭವಾಗಲಿರುವ ಷೇರು ಮಾರುಕಟ್ಟೆಯಲ್ಲಿ ದಿಡೀರ್ ಏರು ಪೇರು ಅಥವಾ ಆಘಾತಕಾರಿ ಏರಿ ಳಿತ ಸಂಭವಿಸದಂತೆ ನಿಗಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದೆ.
SCROLL FOR NEXT