ಬಿಹಾರದಲ್ಲಿ ಮತದಾನ 
ದೇಶ

ಈ ಪಕ್ಷಗಳ ಮುಂದೆ ಗೆದ್ದಿದ್ದು 'ನೋಟಾ'!

ಬಿಹಾರದಲ್ಲಿ ಯಾರು ಗೆದ್ದರೋ, ಬಿಟ್ಟರೋ ಎಂಬ ವಿಚಾರ ಬಿಟ್ಟುಬಿಡೋಣ. ಕನಿಷ್ಠ 4ರಾಜಕೀಯ ಪಕ್ಷಗಳನ್ನು ಹಿಂದೆ ಹಾಕಿ `ನೋಟಾ'(ಮೇಲಿನ ಯಾರೂ ಇಲ್ಲ) ಜಯ...

ಪಟಾನಾ:  ಬಿಹಾರದಲ್ಲಿ ಯಾರು ಗೆದ್ದರೋ, ಬಿಟ್ಟರೋ ಎಂಬ ವಿಚಾರ ಬಿಟ್ಟುಬಿಡೋಣ. ಕನಿಷ್ಠ 4ರಾಜಕೀಯ ಪಕ್ಷಗಳನ್ನು ಹಿಂದೆ ಹಾಕಿ 'ನೋಟಾ'(ಮೇಲಿನ ಯಾರೂ ಇಲ್ಲ) ಜಯ
ಸಾ„ಸಿರುವುದೇ ಇಲ್ಲಿನ ವಿಶೇಷ. ಬಿಹಾರದ ಶೇ.2.6ರಷ್ಟು ನಾಗರಿಕರು ಮಹಾಮೈತ್ರಿಕೂಟ ಮತ್ತು ಎನ್‍ಡಿಎ ಎರಡನ್ನೂ ಸಂಪೂರ್ಣವಾಗಿ ತಿರಸ್ಕರಿಸಿ, ನೋಟಾಗೆ ನಮ್ಮ ವೋಟು 
ಎಂದಿರುವುದಂತೂ ಸತ್ಯ. ಆಯೋಗದ ವೆಬ್‍ಸೈಟೇ  ಈ ಮಾಹಿತಿ ನೀಡಿದೆ. ಮತ ಹಂಚಿಕೆಯಲ್ಲಿ 4 ಪಕ್ಷಗಳನ್ನು ಹಿಂದಿಕ್ಕಿ, ನೋಟಾ ಮುಂದೆ ಸಾಗಿದೆ. 
ನೋಟಾ ಸೋಲಿಸಿದ 4 ಪಕ್ಷಗಳಿವು:
ಹಿಂದೂಸ್ಥಾನಿ ಅವಾಮಿ ಮೋರ್ಚಾ: ಜೆಡಿಯು ನಿಂದ ಹೊರಬಂದು ತನ್ನದೇ ಆದ ಎಚ್‍ಎಎಂ ಪಕ್ಷ ಕಟ್ಟಿಕೊಂಡ ಜಿತನ್ ರಾಂ ಮಾಂಝಿಯ ಪಕ್ಷ ಗಳಿಸಿದ್ದ ಶೇ.2.3ರಷ್ಟು ಮತಗಳನ್ನಷ್ಟೆ.
ಸಮಾಜವಾದಿ ಪಕ್ಷ (ಎಸ್ಪಿ): ಸೀಟು ಹಂಚಿಕೆ ವಿಚಾರವನ್ನಿಟ್ಟುಕೊಂಡು ಮಹಾಮೈತ್ರಿಯಿಂದ ಹೊರಬಂದಿದ್ದ ಎಸ್ಪಿ ಸ್ವತಂತ್ರವಾಗಿ ಸ್ಪರ್ಧಿಸಿತು.
ಯಾದವರ ಮತಗಳನ್ನು ಸೆಳೆಯುವಲ್ಲಿ ಸೋತ ಎಸ್ಪಿಗೆ ಸಿಕ್ಕಿದ್ದು ಕೇವಲ ಶೇ.1.1ರಷ್ಟು ಮತ.
ಎಐಎಂಐಎಂ: ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಮುಸ್ಲಿಮರ ಮತಗಳತ್ತ ಕಣ್ಣು ಹಾಕಿತು. ಎರಡೂ ಮೈತ್ರಿಗಳನ್ನು ತಿರಸ್ಕರಿಸುವಂತೆ ಕರೆ ನೀಡಿತು. ಆದರೆ, ಇದಕ್ಕೆ ಸೊಪ್ಪು ಹಾಕದ ಮತದಾರರು ಈ ಪಕ್ಷಕ್ಕೆ ಕೊಟ್ಟದ್ದು ಶೇ.0.4ರಷ್ಟೇ ಮತ.
ಎಡಪಕ್ಷಗಳು: ಸಿಪಿಐ ಮತ್ತು ಸಿಪಿಎಂ ಈ ಬಾರಿ ಗಳಿಸಿದ್ದು ಕೇವಲ ಶೇ.2ರಷ್ಟು ಮತಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್