ದೇಶ

ಭಾರತದಲ್ಲೇ ಫೇಸ್‍ಬುಕ್‍ ಗೆ ಹೆಚ್ಚು ಕಟ್ಟುನಿಟ್ಟು

Vishwanath S
ನವದೆಹಲಿ: ಫೇಸ್‍ಬುಕ್‍ನ ವಿಷಯಗಳ ಮೇಲೆ ನಿಬಂಧನೆ ಹಾಕುವುದರಲ್ಲಿ ಭಾರತಕ್ಕೇ ಅಗ್ರಸ್ಥಾನ. ಜನವರಿಯಿಂದ ಜೂನ್‍ವರೆಗೆ ಒಟ್ಟು 15,155 ವಿಷಯಗಳನ್ನು ಸರ್ಕಾರ ಬ್ಲಾಕ್ ಮಾಡಿದೆ. 
ಇದು ಕಳೆದ ವರ್ಷಕ್ಕೆ ಹೋಲಿಸಿದg 3 ಪಟ್ಟು ಹೆಚ್ಚು. ಒಟ್ಟಾರೆ ಜಗತ್ತಿನಲ್ಲಿ 20,568 ವಿಷಯಗಳನ್ನು ಫೇಸ್‍ಬುಕ್‍ನಲ್ಲಿ ನಿಷೇಧಿಸಲಾಗಿದೆ. ಟರ್ಕಿ 4496 ನಿಷೇಧಿತ ವಿಷಯಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. 
ಈ ನಿಷೇಧಗಳಲ್ಲಿ ಕೆಲವು ಸರ್ಕಾರವೇ ಸ್ವಯಂಪ್ರೇರಿತವಾಗಿ ಮಾಡಿಸಿದರೆ, ಹೆಚ್ಚಿನವುಗಳು ಬಳಕೆದಾರರ ವಿನಂತಿಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತವೆ. ಸರ್ಕಾರದ ಮನವಿಗಳಿಗೆ ಫೇಸ್‍ಬುಕ್ ಸ್ಪಂದಿಸುತ್ತಾದರೂ ಬಳಕೆದಾರರ ಪ್ರೈವೆಸಿಯನ್ನು ಕಸಿಯುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.
SCROLL FOR NEXT