ಬ್ರಿಟನ್ ಸಂಸತ್ ನಲ್ಲಿ ಮೋದಿ ಭಾಷಣ: ಉಮರ್ ಅಬ್ದುಲ್ಲಾ ಪ್ರಶಂಸೆ
ಬ್ರಿಟಿಷ್ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅದ್ಭುತವಾಗಿ ಭಾಷಣ ಮಾಡಿದರು ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಪ್ರಶಂಸೆ....
ಶ್ರೀನಗರ: ಬ್ರಿಟಿಷ್ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅದ್ಭುತವಾಗಿ ಭಾಷಣ ಮಾಡಿದರು ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಸದಾ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುವ ಬದಲು. ಸುಖಾ ಸುಮ್ಮನೆ ಟೀಕಿಸುವ ಬದಲು, ಪ್ರಧಾನಿ ಮಾಡಿದ ಭಾಷಣಕ್ಕೆ ಏಕೆ ಹೆಮ್ಮೆ ಪಡಬಾರದು?,' ಎಂದು ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
'ಪ್ರಧಾನಿಗೆ ಮೋದಿಗೆ ಅತ್ಯಂತ ಕಠಿಣ ಪ್ರಶ್ನೆಗಳನ್ನು ಕೇಳಿದ್ದು, ಕೆಲವೊಂದನ್ನು ಕೇಳಬಾರದೆಂಬ ಯಾವುದೇ ನಿರ್ಬಂಧವಿರಲಿಲ್ಲ, 'ಗಾರ್ಡಿಯನ್' ಪ್ರಶ್ನೆ ಕೇಳದೇ ಪ್ರಧಾನಿಗೆ ಅಗೌರವ ತೋರಿದೆ,' ಎಂದೂ ಉಮರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕನಿಗೆ ಸಾಮಾನ್ಯವಾಗಿ ಸಲ್ಲಿಸುವ ಗೌರವ ಪಡೆಯಲು ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಬಗೆಯಿಂದಾಗಿಯೇ ಮೋದಿ ಅರ್ಹರಲ್ಲ ಎಂಬುದು ಲಂಡನ್ ಬೀದಿಗಳಲ್ಲಿ ನಡೆದ ಪ್ರತಿಭಟನೆ ಹೇಳುತ್ತದೆ,' ಎಂದು ಗಾರ್ಡಿಯನ್ ವರದಿ ಮಾಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.