ದೇಶ

ರೈಲ್ವೆ ಎಸಿ ಟಿಕೆಟ್ ದರ ಏರಿಕೆ

Srinivasamurthy VN

ನವದೆಹಲಿ: ರೈಲ್ವೆ ಸಚಿವಾಲಯ ಶನಿವಾರ ಎಲ್ಲ ಎಸಿ ಪ್ರಯಾಣ ದರಗಳನ್ನು ಶೇ.4.35- ರಷ್ಟು ಹೆಚ್ಚಿಸಿದ್ದು ಭಾನುವಾರದಿಂದಲೇ ಕಾರ್ಯರೂಪಕ್ಕೆ ಬರಲಿದೆ.

ಎಲ್ಲ ಸೇವಾ ತೆರಿಗೆ ಮೇಲೆ ಸ್ವಚ್ಛ ಭಾರತ ಸೆಸ್ ವಿಧಿಸಿರುವುದರ ಭಾಗವಾಗಿ ರೈಲು ಪ್ರಯಾಣ ದರಗಳನ್ನೂ ಹೆಚ್ಚಿಸಲಾಗಿದೆ. ಹಾಗಿದ್ದರೂ ನ.15ಕ್ಕಿಂತಲೂ ಮೊದಲ ಪಡೆದಿರುವ ಟಿಕೆಟ್ ಗಳಿಗೆ  ಇದು ಅನ್ವಯವಾಗುವುದಿಲ್ಲ. ಸಾಮಾನ್ಯ ಮತ್ತು ಸ್ಲೀಪರ್ ಕ್ಲಾಸ್‍ಗಳಿಗೆ ಈ ತೆರಿಗೆ ಅನ್ವಯವಾಗುವುದಿಲ್ಲ ಎಂದು ರೈಲ್ವೆ ಸಚಿವಾಲಯದ ಸುತ್ತೋಲೆ ಸ್ಪಷ್ಟಪಡಿಸಿದೆ.

SCROLL FOR NEXT