ದೇಶ

ಕ್ಯಾನ್ಸರ್ ಔಷಧಗಳಿಗೆ ಡಿಸ್ಕೌಂಟ್

Srinivas Rao BV

ನವದೆಹಲಿ: ಕ್ಯಾನ್ಸರ್ ಮತ್ತು ಹೃದಯಸಂಬಂಧಿ ಸಮಸ್ಯೆಗಳ ಚಿಕಿತ್ಸೆಯ ದುಬಾರಿ ವೆಚ್ಚವನ್ನು ಇಳಿಸುವ ಹಂತವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಏಮ್ಸ್ ನಲ್ಲಿ  ಅಮೃತ್ ಮಳಿಗೆಗಳನ್ನು ಆರಂಭಿಸಿದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ ಅಮೃತ್ (ಚಿಕಿತ್ಸೆಗೆ ಲಭ್ಯ ಔಷಧಗಳು ಮತ್ತು ನಂಬಿಕಸ್ಥ ಇಂಪ್ಲಾಂಟ್‍ಗಳು) ಮಳಿಗೆಗಳಲ್ಲಿ ೨೦೨ ಬಗೆಯ ಕ್ಯಾನ್ಸರ್ ಮತ್ತು ಹೃದಯಸಂಬಂಧಿ  ಔಷಧಗಳು ಶೇ.60ರಿಂದ 90 ಶೇಕಡ ರಿಯಾಯಿತಿ ಬೆಲೆಯಲ್ಲಿ ದೊರೆಯಲಿವೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. ಅದೇ ರೀತಿ 148 ಬಗೆಯ ಹೃದಯದ ಇಂಪ್ಲಾಂಟ್‍ಗಳು ಶೇ.50ರಿಂದ 60ರ ಡಿಸ್ಕೌಂಟ್‍ನಲ್ಲಿ ದೊರೆಯಲಿವೆ.

SCROLL FOR NEXT