ಮುಂಬೈ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರ `ಮಾತೋಶ್ರೀ'' ನಿವಾಸದಲ್ಲಿ ಒಬ್ಬ ಕೆಲಸದಾಳಿಗೆ ಇರಿಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.
ನ.14ರಂದು ರಾತ್ರಿ ಇಬ್ಬರು ಕೆಲಸದಾಳುಗಳ ಪೈಕಿ ಒಬ್ಬ ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಸೇವಕನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬಾಂದ್ರಾದಲ್ಲಿರುವ ಬಿಗಿ ಭದ್ರತೆಯ ನಿವಾಸಕ್ಕೆ ನುಗ್ಗಿದ್ದ. ಅವರಿಬ್ಬರ ನಡುವೆ ಕಾಳಗ ಏರ್ಪಟ್ಟು ಇಬ್ಬರೂ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿರೇಂದ್ರ ಮಿಶ್ರಾ ತಿಳಿಸಿದ್ದಾರೆ.
ಇಬ್ಬರ ಜಗಳವನ್ನು ಬಿಡಿಸಲು ಬಂದ ಮತ್ತೊಬ್ಬ ಕೆಲಸಗಾರನಿಗೂ ಗಾಯಗಳಾಗಿವೆ. ಅವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.