ನವದೆಹಲಿ: ಲೂಸಿಯಾನಾ ಗವರ್ನರ್ ಬಾಬ್ಬಿ ಜಿಂದಾಲ್ ಅವರು ತಮ್ಮ ಅಧ್ಯಕ್ಷೀಯ ಚುನಾನಣಾ ಪ್ರಚಾರವನ್ನು ಕೊನೆಗೊಳಿಸಿದ್ದಾರೆ.
ಇದು ನನ್ನ ಸಮಯ ಅಲ್ಲ ಎಂಬ ಸತ್ಯ ತಮ್ಮ ಅರಿವಿಗೆ ಬಂದಿದೆ. ಹೀಗಾಗಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕಾಗಿ ನಡೆಸುತ್ತಿರುವ ಪ್ರಚಾರವನ್ನು ಕೊನೆಗೊಳಿಸುತ್ತಿರುವುದಾಗಿ ಪ್ರಕಟಿಸಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಜಿಂದಾಲ್ ಹೇಳಿದ್ದಾರೆ.
ಬಾಬಿ ಜಿಂದಾಲ್ ಜೂನ್ ತಿಂಗಳಲ್ಲಿ ಅಧ್ಯಕ್ಷೀಯ ಸ್ಥಾನದ ಸ್ಪರ್ಧೆಗಾಗಿ ಪ್ರಚಾರಕ್ಕೆ ಇಳಿದಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅವರಿಗೆ ಕಡಿಮೆ ಮತಗಳು ಬಂದಿದ್ದವು.ಈ ಹಿನ್ನೆಲೆಯಲ್ಲಿ ಅಧ್ಯಕ್ಷಿಯ ಚುನಾವಣೆಯ ಪ್ರಚಾರವನ್ನು ಅಂತ್ಯಗೊಳಿಸಿದ್ದಾರೆ.
2008ರಿಂದ ಜಿಂದಾಲ್ ಲೂಸಿಯಾನಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಭಾರತೀಯ ಮೂಲದವರಾಗಿದ್ದ ಜಿಂದಾಲ್ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯ ಪ್ರಚಾರದ ಸಂದರ್ಭದಲ್ಲಿ ‘ನಾನು ಭಾರತೀಯ ಮೂಲದ ಅಮೆರಿಕನ್’ ಎಂಬುದಾಗಿ ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ’ ಎಂದು ತಿಳಿಸಿದ್ದರು.