ಸಾಂದರ್ಭಿಕ ಚಿತ್ರ 
ದೇಶ

ನಾಲ್ಕು ತಿಂಗಳಲ್ಲಿ ದೇಶದಲ್ಲಿ ನಡೆದದ್ದು 300 ಕೋಮು ಗಲಭೆ!

ದೇಶದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 300 ಕೋಮುಗಲಭೆ ನಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ಸಿಕ್ಕ ಮಾಹಿತಿಯಿಂದ ಬಹಿರಂಗವಾಗಿದೆ...

ನವದೆಹಲಿ: ದೇಶದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 300 ಕೋಮುಗಲಭೆ ನಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ಸಿಕ್ಕ ಮಾಹಿತಿಯಿಂದ ಬಹಿರಂಗವಾಗಿದೆ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಇದ್ಯಾವುದೂ ಸಂಭವಿಸಿಲ್ಲ. 
ಅದೇ ವೇಳೆ ಇಂಥಾ ಗಲಭೆಗಳು ಉಂಟಾಗಲು ಪ್ರೇರಣೆ ನೀಡುತ್ತಿರುವುದು ಸಾಮಾಜಿಕ ತಾಣಗಳೇ ಆಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಂಸತ್ ಸಮಿತಿಗೆ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ ವರದಿಯಲ್ಲಿ ಈ ವರ್ಷ ಅಕ್ಟೋಬರ್ ತಿಂಗಳವರೆಗೆ 630  ಕೋಮುಗಲಭೆಗಳು ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ  300 ಘಟನೆಗಳು ಕಳೆದ ನಾಲ್ಕು ತಿಂಗಳಲ್ಲಿ ನಡೆದುದ್ದಾಗಿದೆ.  ಈ ಸಂಘರ್ಷಗಳಲ್ಲಿ 68 ಜನರು ಸಾವಿಗೀಡಾಗಿದ್ದು,  1899 ಮಂದಿಗೆ ಗಾಯಗಳಾಗಿವೆ.
ದೇವಾಲಯಗಳಿಗೆ ಸಂಬಂಧಿಸಿದಂತೆ  ಫರಿದಾಬಾದ್‌ನ ಅಟ್ಟಾಲಿಯಲ್ಲಿ, ಮತ್ತು ದಾದ್ರಿಯಲ್ಲಿ ನಡೆದ ಗೋಮಾಂಸ ಸಂಘರ್ಷವನ್ನು ಮಾತ್ರವೇ ಅತೀ ದೊಡ್ಡ  ಕೋಮು ಗಲಭೆ ಎಂದು ಇಲ್ಲಿ ಉಲ್ಲೇಖಿಸಲಾಗಿದೆ. 
ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ 2013 ರಲ್ಲಿ  823 ಕೋಮು ಗಲಭೆಗಳು ದೇಶದಲ್ಲಿ ನಡೆದಿದೆ.  ಮೋದಿ ಅಧಿಕಾರಕ್ಕೇರಿದ ನಂತರ 2014 ಇದು 644 ಆಗಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ