ರಾಮೇಶ್ವರಂ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ದೆಹಲಿಯ ನಿವಾಸವನ್ನು ಜ್ಞಾನಕೇಂದ್ರವಾಗಿ ಪರಿವರ್ತಿಸಲು ವಿಫಲವಾಗಿದೆ ಎಂದು ಆರೋಪಿಸಿ ಕಲಾಂ ಅವರ ಸಂಬಂಧಿಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
2012ರಲ್ಲಿ ಬಿಜೆಪಿಯನ್ನು ಸೇರಿದ್ದ ಎ.ಪಿ.ಜೆ.ಅಯ್ಯದ್ ಹಾಜ ಇಬ್ರಾಹಿಂ ತಮಿಳುನಾಡು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿದ್ದರು. ತಮ್ಮ ಹುದ್ದೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾನೆ ನೀಡಿದ್ದಾರೆ.
`ಜ್ಞಾನಕೇಂದ್ರದ ಸ್ಥಾಪನೆ ಬರಿಯ ಕಲಾಂ ಅವರದಷ್ಟೇ ಅಲ್ಲ, ಇಡೀ ದೇಶದ ಬಯಕೆಯಾಗಿತ್ತು. ಪದೇ ಪದೆ ವಿನಂತಿ ಮಾಡಿಕೊಂಡರೂ ಸರ್ಕಾರ ತಮ್ಮ ಮನವಿಗೆ ಸ್ಪಂದಿಸಿಲ್ಲ' ಎಂದು ಅವರು ಆರೋಪಿಸಿದ್ದಾರೆ.