ಮಲೇಷ್ಯಾ ಪ್ರಧಾನಿ ನಜೀಬ್ ರಝಾಕ್ ಜತೆ ಪ್ರಧಾನಿ ಮೋದಿ
ಕೌಲಾಲಂಪುರ/ ಸಿಂಗಾಪುರ: ವಿಶ್ವ ಶಾಂತಿಗೆ ತಲೆನೋವಾಗಿ ಪರಿಣಮಿಸುತ್ತಿರುವ ಭಯೋತ್ಪಾದನೆ ನಿರ್ಮೂಲನೆಗೆ ಭಾರತ ಮತ್ತು ಮಲೇಷ್ಯಾ ನಿರ್ಧರಿಸಿವೆ. ಭದ್ರತೆ ಮತ್ತು ರಕ್ಷಣಾ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಎರಡೂ ದೇಶಗಳುತೀರ್ಮಾನಿಸಿವೆ. ಮಲೇಷ್ಯಾ ಪ್ರಧಾನಿ ನಜೀಬ್ ರಝಾಕ್ ಜತೆಗೆ ಸೋಮವಾರ ನಿಯೋಗ ಹಂತದ ಮಾತುಕತೆ ಬಳಿಕ ಜಂಟಿ ಹೇಳಿಕೆ ನೀಡಿದ ಪ್ರಧಾನಿ ಮೋದಿ, ಭಾರತ ಮತ್ತು ಅಫ್ಘಾನಿಸ್ತಾ ನದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಪ್ರಸ್ತಾಪಿಸಿ ಉಗ್ರವಾದದ ಆತಂಕವನ್ನು ತೆರೆದಿ ಟ್ಟರು. ಈ ಎರಡು ದೇಶಗಳಲ್ಲಿ ನಡೆಯುವ ದಾಳಿ ಪ್ರಯತ್ನಗಳು ಭಯೋತ್ಪಾದನೆಯ
ಅಂತಾರಾಷ್ಟ್ರೀಯ ಲಕ್ಷಣಗಳನ್ನು ನೆನಪಿಸುತ್ತವೆ ಎಂದರು. ಇದೇ ವೇಳೆ, ಭಯೋತ್ಪಾದನೆ ಮತ್ತು ಧರ್ಮದ ನಡುವಿನ ಸಮೀಕರಣವನ್ನು ತಿರಸ್ಕರಿಸಿ ಮೂಲಭೂತವಾದ ಮತ್ತು ಉಗ್ರ
ವಾದದ ವಿರುದ್ಧ ಹೋರಾಟ ರೂಪಿಸುವಲ್ಲಿ ಮಲೇಷ್ಯಾ ಪ್ರಧಾನಿ ರಝಾಕ್ ಉತ್ತಮ ನಾಯಕತ್ವ ಪ್ರದರ್ಶಿಸಿದ್ದಾರೆ. ಇಸ್ಲಾಂನ ನೈಜ ಮೌಲ್ಯಗಳನ್ನು ರಝಾಕ್ ಎತ್ತಿಹಿಡಿದಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತೋರಣ ಗೇಟ್ ಉದ್ಘಾಟನೆ: ಕೌಲಾಲಂ ಪುರದ ಲಿಟ್ಲ್ ಇಂಡಿಯಾ ಎಂದೇ ಕರೆಯ ಲ್ಪಡುವ ಬ್ರಿಕ್ ಫೀಲ್ಢ್ಸ್ ನಲ್ಲಿ ನಿರ್ಮಿಸಲಾಗಿ ರುವ ಅದ್ಭುತ ಶಿಲ್ಪಕಲಾ ಕೆತ್ತನೆಯಿರುವ
`ತೋರಣ ಗೇಟ್'(ದ್ವಾರ) ಅನ್ನು ನರೇಂದ್ರ ಮೋದಿ ಹಾಗೂ ಮಲೇಷ್ಯಾ ಪ್ರಧಾನಿ ನಜೀಬ್ ರಝಾಕ್ ಉದ್ಘಾಟಿಸಿದ್ದಾರೆ.ಕೌಲಾಲಂಪುರದ ಲಿಟ್ಲ್ ಇಂಡಿಯಾಯೋ ಜನೆಗೆ ಕೊಡುಗೆಯಾಗಿ ಭಾರತವು ಈ ಗೇಟ್ ನಿರ್ಮಿಸಿದೆ. ಈ ಗೇಟ್ ನಿರ್ಮಾಣಕ್ಕೆ ರು.6.70 ಕೋಟಿ ವೆಚ್ಚ ಮಾಡಲಾಗಿದೆ. ಈ ಗೇಟ್ ಅನ್ನು ಸಾಂಚಿಯಲ್ಲಿ ರುವ ಬೌದ್ಧ ಸ್ಥೂಪಗಳಲ್ಲಿರುವ ತೋರಣ ಗಳಿಂದ ಪ್ರೇರಣೆ ಪಡೆದು ನಿರ್ಮಿಸಲಾಗಿದೆ. ಪ್ರಾಚೀನ ಭಾರತೀಯ ಹಾಗೂ ಇಸ್ಲಾಮಿಕ್ ಕಲೆಯ ಮಿಶ್ರಣ ಈ ಗೇಟ್‍ನಲ್ಲಿ ಕಾಣ ಸಿಗುತ್ತದೆ. ಸಾಗರ, ಬಾಹ್ಯಾಕಾಶದಲ್ಲಿ ಪೈಪೋಟಿ ಬೇಡ: ಮಲೇಷ್ಯಾ ಪ್ರವಾಸ ಮುಗಿಸಿ ಶನಿವಾರ ಸಂಜೆ ಸಿಂಗಾಪುರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ, ಸಾಗರಗಳು, ಬಾಹ್ಯಾಕಾಶ ಹಾಗೂ ಸೈಬರ್ ಜಗತ್ತು ದೇಶ ದೇಶಗಳ ನಡುವಿನ ಸ್ಪರ್ಧೆಯ ಹೊಸ ವೇದಿಕೆಗಳಾಗ ಬಾರದು. ಬದಲಾಗಿ ಅದು ಎಲ್ಲರ ಸಮೃದ್ಧಿಯ ಭಾಗವಾಗಬೇಕು ಎಂದರು.